ಎಸ್‌ಆರ್‌ಎಸ್ ಕಾಲೇಜಿಗೆ ಏಮ್ಸ್, ಐಐಟಿ ಗರಿ

SRS FRONT 1
Published on

ಚಿತ್ರದುರ್ಗ: ನಗರದ ಎಸ್‌ಆರ್‌ಎಸ್ ಪಿಯು ಕಾಲೇಜಿನ ಮೂವರು ವಿದ್ಯಾರ್ಥಿಗಳು ಅತ್ಯುನ್ನತ ವೈದ್ಯಕೀಯ ಸಂಶೋಧನಾ ಸಂಸ್ಥೆ ಏಮ್ಸ್ ಹಾಗೂ ಜೆಐಪಿ ಎಂಇಆರ್‌ಗೆ ಆಯ್ಕೆಯಾಗಿದ್ದಾರೆ.

ಎನ್.ಮರುಳಸಿದ್ದನಗೌಡ (676) ಹಾಗೂ ಡಿ.ಯಶಸ್ ಕ್ರಮವಾಗಿ ರಾಯ್‌ಬರೇಲಿ ಹಾಗೂ ಮಂಗಳಗಿರಿ ಏಮ್ಸ್, ಟಿ.ಆಯುಷ್ ಪಾಂಡಿಚೇರಿಯ ಜೆಐಎಂಇಆರ್‌ಗೆ ಅಯ್ಕೆಯಾಗಿದ್ದಾನೆ.

ನೀಟ್-2023ರಲ್ಲಿ ಕ್ರಮವಾಗಿ 665,660 ಅಂಕ ಗಳಿಸಿದ್ದ ಚಿನ್ಮಯ್ ಎಂ.ಗೌಡ ಹಾಗೂ ಕೆ.ಎಂ.ಮಧುಸೂದನ್ ಅವರು ಏಮ್ಸ್‌ಗೆ ಅರ್ಹತೆಯಿದ್ದರೂ, ಬೆಂಗಳೂರು ಮೆಡಿಕಲ್ ಕಾಲೇಜನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ವರ್ಷದ ನೀಟ್ ಪರೀಕ್ಷೆಯಲ್ಲಿ 150ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ನೀಟ್ ಅರ್ಹತೆಗಳಿಸಿದ್ದಾರೆ.

ಜೆಇಇ ಅಡ್ವಾನ್ಸ್‌ನಲ್ಲಿ ಅತ್ಯುತ್ತಮ ರ‌್ಯಾಂಕ್ ಗಳಿಸಿದ್ದ ವಿದ್ಯಾರ್ಥಿಗಳು ಪ್ರತಿಷ್ಠಿತ ಐಐಟಿ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿದ್ದಾರೆ. ಎಚ್.ಎಸ್.ಜಯಂತ್, ಡಿ.ಯಶಸ್ ಹಾಗೂ ಅವಿನಾಶ್ ಬೇತೂರು ಕ್ರಮವಾಗಿ ಜೋಧ್‌ಪುರ, ರೂರ್ಕಿ ಹಾಗೂ ಪಾಲಕ್ಕಾಡ್ ಐಐಟಿಗಳಲ್ಲಿ ಪ್ರವೇಶ ಪಡೆದಿದ್ದಾರೆ.

ಎಚ್.ಎಸ್.ಜಯಂತ್ ಕಂಪ್ಯೂಟರ್ ಸೈನ್ಸ್‌ಗಾಗಿ ಐಐಟಿ ಜೋಧ್‌ಪುರ್ ತೊರೆದು ಸೂರತ್‌ಕಲ್ ಎನ್‌ಐಟಿನಲ್ಲಿ ಪ್ರವೇಶ ಪಡೆದಿದ್ದರೆ, ಇನ್ನೂ ಮೂವರು ವಿದ್ಯಾರ್ಥಿಗಳು ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಮಹಾವಿದ್ಯಾಲಯ ಐಐಐಟಿಗೆ ಅರ್ಹತೆ ಪಡೆದಿದ್ದಾರೆ. ಸಂಜನಾ, ಸುಮಧ್ವಕೃಷ್ಣ ಹಾಗೂ ವರ್ಧಮಾನ್‌ರಾಯಲ್ ಕ್ರಮವಾಗಿ ಧಾರವಾಡ, ವಾರಂಗಲ್ ಹಾಗೂ ರಾಯಚೂರ್ ಐಐಐಟಿಗಳಿಗೆ ಆಯ್ಕೆಯಾಗಿದ್ದಾರೆ.

ಕಾಲೇಜಿನ ಸಂಘಟಿತ, ಸಮಯೋಚಿತ ತರಬೇತಿ ಹಾಗೂ ಪರಿಣಿತ ತರಬೇತುದಾರರ ಅನುಭವ ಪರೀಕ್ಷಾರ್ಥಿಗಳ ಸಾಧನೆಗೆ ಕಾರಣವಾಗಿದೆ. ಐಐಟಿ, ಜೆಇಇ, ನೀಟ್, ಸಿಇಟಿ ಹಾಗೂ ಸಿಎ ಪರೀಕ್ಷೆಗಳಲ್ಲಿ ಅತ್ಯುತ್ತಮ ಫಲಿತಾಂಶ ದಾಖಲಿಸುತ್ತಿದ್ದಾರೆ ಎಂದು ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net