

ರಾಯಚೂರು ಭಗತ್ ಸಿಂಗ್,ಸುಖದೇವ್, ರಾಜಗುರು ಅವರ ಹುತಾತ್ಮ ದಿನವನ್ಮು ನಗರದ ಭಗತ್ ಸಿಂಗ್ ವೃತ್ತದಲ್ಲಿ ಭಾನುವಾರ ಎಐಡಿಎಸ್‌ಒ, ಎಐಡಿವೈಒ, ಎಐಎಂಎಸ್‌ಎಸ್ ವತಿಯಿಂದ ಆಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಎಐಎಂಎಸ್‌ಎಸ್‌ನ ಜಿಲ್ಲಾ ಸಂಘಟನಾಗಾರ್ತಿ ಸರೋಜಾ ಗೊನವಾರ್ ಮಾತನಾಡಿ, ಭಾರತದ ಸ್ವತಂತ್ರ ಸಂಗ್ರಾಮದಲ್ಲಿ ಎರಡು ಪಂಥಗಳಿತ್ತು. ಒಚಿದು ಗಾಂಽÃಜಿ ನೇತೃತ್ವದ ಕಾಂಗ್ರೆಸ್, ಇದು ರಾಜಿ ಪಂಥ.ಇನ್ನೊAದು ನೇತಾಜಿ ಮತ್ತು ಭಗತ್ ಸಿಂಗ್ ಅವರ ನೇತೃತ್ವದ ಕ್ರಾಂತಿಕಾರಿಗಳ ಗುಂಪು. ಕ್ರಾಂತಿಕಾರಿಗಳು ಈ ಪಂಥವು ಜಾತಿ ಪದ್ಧತಿ, ಕೋಮುವಾದದಂತ ಸಾಮಾಜಿಕ ಪಿಡುಗುಗಳ ವಿರುದ್ಧ ರಾಜಿರಹಿತವಾಗಿ ಹೋರಾಟ ನಡೆಸಿತು.
ಕೇವಲ ಬ್ರಿಟಿಷರ ಕಪಿಮುಷ್ಠಿಯಿಂದ ಭಾರತದ ಶ್ರೀಮಂತರಿಗೆ ಅಽಕಾರ ಹಸ್ತಾಂತರವನ್ನು
ಬಯಸಲಿಲ್ಲ, ಬದಲಿಗೆ ಅವರು ಬಯಸಿದ್ದು ಸಾಮಾಜಿಕ ವ್ಯವಸ್ಥೆಯ ಸಮಗ್ರ ಬದಲಾವಣೆ. ದೇಶದ ರೈತ-ಕಾರ್ಮಿಕರ ನೇತೃತ್ವದಲ್ಲಿ ಹೋರಾಟ ನಡೆಯಬೇಕು ಮಾನವನಿಂದ ಮಾನವನಿಗೆ ಯಾವುದೇ ಶೋಷಣೆ ಇಲ್ಲದ ಸಮಾಜ ಸ್ಥಾಪಿಸುವುದು ಅವರ ಗುರಿಯಾಗಿತ್ತು ಎಂದರು.
ಎಐಡಿಎಸ್‌ಒ ಜಿಲ್ಲಾ ಅಧ್ಯಕ್ಷ ಹಯ್ಯಾಳಪ್ಪ ಮಾತನಾಡಿ, ಭಗತ್ ಸಿಂಗ್ ಅವರು ಯಾವತ್ತೂ ಜೀವನದಲ್ಲಿ ರಾಜಿ ಮಾಡಿಕೊಳ್ಳಲಿಲ್ಲ. ನಂಬಿದ ತತ್ವಕ್ಕಾಗಿ ಜೀವವನ್ನೇ ಕೊಟ್ಟರು. ಬ್ರಿಟಿಷರ ವಿರುದ್ಧ ರಾಜಿ ಮಾಡಿಕೊಳ್ಳದೆ ನಗುನಗುತ್ತಾ ಗಲ್ಲಿಗೆ ಹೋದರು. ಆದರೆ ಇಚಿದು ದೇಶವು ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಬಿಕ್ಕಟ್ಟಿನಲ್ಲಿದೆ. ಶಿಕ್ಷಣ ಮತ್ತು ಆರೋಗ್ಯವು ಸಂಪೂರ್ಣವಾಗಿ ಖಾಸಗಿಕರಣವಾಗುತ್ತಿದ್ದು, ಹಣ ಇದ್ದವರಿಗೆ ಮಾತ್ರ ಶಿಕ್ಷಣ, ಆರೋಗ್ಯ ಸಿಗುವಚಿತಾಗಿದೆ ಎಂದರು.
ಈ ಸಂದರ್ಭದಲ್ಲಿ ಎಐಡಿವೈಒ ರಾಜ್ಯಾಧ್ಯಕ್ಷ ಶರಣಪ್ಪ ಉದ್ಬಾಳ,ವಿನೋದ್‌ಕುಮಾರ್, ಜಿಲ್ಲಾಧ್ಯಕ್ಷ ಚನ್ನಬಸವ ಜಾನೇಕಲ್, ಬಸವರಾಜ್, ಪೀರ್ ಸಾಬ್, ಮಹೇಶ್ ಚಿಕಲ್‌ಪರ್ವಿ ಮತ್ತು ಅಣ್ಣಪ್ಪ, ನಂದ ಗೋಪಾಲ್, ಅರವಿಂದ್, ಅಂಬಿಕಾ, ನಾಗವೇಣಿ, ಮೌನೇಶ್, ಸಂದೀಪ್, ಪವನ್ ಸೇರಿದಂತೆ ಅನೇಕರು ಇದ್ದರು.