"ಏಡ್ಸ್​' ಕರೆದರೆ ಮಾತ್ರ ಬರುವ ಅತಿಥಿ

AIDS is a guest who only comes when invited.
ವಿಜಯಪುರದ ಬಿಎಲ್​ಡಿಇ ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಮಹಾವಿದ್ಯಾಲಯದಲ್ಲಿ ವಿಶ್ವ ಏಡ್ಸ್​ ದಿನಾಚರಣೆಯ ಹಿನ್ನೆಲೆ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಸಂಜು ಬಂಟನೂರ ಮಾತನಾಡಿದರು. ಡಾ. ಸವಿತಾ ಲಮಾಣಿ, ಡಾ. ಭಕ್ತಿ ಮಹೇಂದ್ರಕರ, ವಿ.ಎಸ್​. ನಂದೇಶ ಮತ್ತಿತರರಿದ್ದಾರೆ.
Published on

ವಿಜಯಪುರ: ಎಚ್​ಐವಿ ಮತ್ತು ಏಡ್ಸ್​ ತಡೆಗಟ್ಟುವಲ್ಲಿ ಯುವ ಜನತೆಯ ಪಾತ್ರ ಅತಿ ಮುಖ್ಯವಾಗಿದೆ ಎಂದು ಬಿಎಲ್​ಡಿಇ ಸಂಸ್ಥೆಯ ಬಿ.ಎಂ. ಪಾಟೀಲ ವೈದ್ಯಕಿಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಔಷಧ ವಿಭಾಗದ ಮುಖ್ಯಸ್ಥ ಡಾ. ಸಂಜು ಬಂಟನೂರ ಹೇಳಿದರು.

ನಗರದ ಬಿಎಲ್​ಡಿಇ ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಮಹಾವಿದ್ಯಾಲಯದ ಐಕ್ಯೂಎಸಿ, ರಾಷ್ಟ್ರೀಯ ಸೇವಾ ಯೋಜನೆ ಟಕ&1 ಮತ್ತು ಟಕ&2 ರ ಸಹಯೋಗದಲ್ಲಿ ಸೋಮವಾರ ವಿಶ್ವ ಏಡ್ಸ್​ ದಿನಾಚರಣೆಯ ಹಿನ್ನೆಲೆ "ಏಡ್ಸ್​ ನಿಮೂರ್ಲನೆಯಲ್ಲಿ ಯುವಕರ ಪಾತ್ರ" ಎಂಬ ವಿಷಯದ ಕುರಿತು ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಎಚ್​ಐವಿ ಏಡ್ಸ್​ ಎಂಬುದು ತಾನಾಗೆ ಬರುವ ರೋಗವಲ್ಲ ಬದಲಾಗಿ ಅದು ಕರೆದರೆ ಮಾತ್ರ ಬರುವ ಅತಿಥಿ ಎಂದು ತಿಳಿಸಿದರು.

ಮುಖ್ಯ ಅತಿಥಿ ಸಂಸ್ಥೆಯ ಜೀವನ ಕೌಶಲ್ಯ ಶಿಣ ವಿಭಾಗದ ನಿರ್ಮಲಾ ಜಿ., ಮಾತನಾಡಿ, ಏಡ್ಸ್​ ರೋಗವು ಹೆಚ್ಚಾಗಿ ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಬರುತ್ತದೆ. ಯುವಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ತಮ್ಮಣ್ಣ ವೈ., ಮಾತನಾಡಿದರು. ಐಕ್ಯೂಎಸಿ ಸಂಯೋಜಕಿ ಡಾ. ಭಕ್ತಿ ಮಹೇಂದ್ರಕರ, ಎನ್​ಎಸ್​ಎಸ್​ ಅಧಿಕಾರಿಗಳಾದ ವಿ.ಎಸ್​. ನಂದೇಶ, ಡಾ. ಸವಿತಾ ಲಮಾಣಿ ವೇದಿಕೆಯಲ್ಲಿದ್ದರು.

ವಿದ್ಯಾರ್ಥಿನಿ ಪ್ರಿಯಾ ಮೇಲ್ಕುಂದಿ, ವೈಶಾಲಿ ಅಗಸರ ಪ್ರಾರ್ಥಿಸಿದರು. ಡಾ. ಕೆ.ಎ. ಪಾಟೀಲ ಸ್ವಾಗತಿಸಿ ಪರಿಚಯಿಸಿದರು. ವಿದ್ಯಾರ್ಥಿನಿ ಸುಪ್ರೀಯಾ ಬನಸೋಡೆ ನಿರೂಪಿಸಿದರು. ಮೇಹಬೂಬ ಜಮಾದಾರ ವಂದಿಸಿದರು.

ಹಿರಿಯ ಪ್ರಾಧ್ಯಾಪಕ ಡಾ. ಎ.ಟಿ. ಶ್ರೀನಿವಾಸ, ಡಾ. ಬಿ.ವಿ. ಪಾಟೀಲ, ವಿದ್ಯಾರ್ಥಿನಿಯರು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net