

ಕಲಕೇರಿ: ಏಡ್ಸ್ ಮಹಾಮಾರಿ ರೋಗದ ವಿರುದ್ಧ ಎಲ್ಲರೂ ಹೋರಾಡಬೇಕಿದ್ದು, ಇದರ ಬಗ್ಗೆ ಎಲ್ಲರಿಗೂ ಅರಿವು ಮೂಡಿಸುವುದು ಅವಶ್ಯವಾಗಿದೆ. ಯುವಜನತೆ ಆರೋಗ್ಯವೇ ಭಾಗ್ಯ ಎನ್ನುವುದರ ಮಹತ್ವ ಅರಿತು ದುಶ್ಚಟಗಳಿಂದ ದೂರವಿದ್ದು ಆರೋಗ್ಯವಂತ ಸಮಾಜ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಆದರ್ಶ ಪದವಿ ಕಾಲೇಜಿನ ಪ್ರಾಚಾರ್ಯ ಎಸ್.ಎಂ.ಸಜ್ಜನ ಹೇಳಿದರು.
ಗ್ರಾಮದ ಎ.ಕೆ ಸಿರಸಗಿ ಪಿಯು ಮತ್ತು ಆದರ್ಶ ಪದವಿ ಕಾಲೇಜು, ಆಲ್‌ಅಮಿನ್ ಪ್ಯಾರಾ ಮೆಡಿಕಲ್ ಕಾಲೇಜು, ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಡಿ ಮೊತಿಬಾಯಿ, ಆಪ್ತ ಸಮಾಲೋಚಕ ಡಾ.ಸಂತೋಷ ಟೆಂಗಳಿ, ಪ್ರಯೋಗಾಲಯ ಹಿರಿಯ ತಜ್ಞ ಎಸ್.ಬಿ.ಜೇವೂರ ಮಾತನಾಡಿ, ಯುವ ಜನತೆ ಹಾಗೂ ಸಮುದಾಯಗಳು ಸರ್ಕಾರದೊಂದಿಗೆ ಕೈಜೋಡಿಸಿದರೆ ಎಚ್.ಐ.ವಿ, ಏಡ್ಸ್ ರೋಗವನ್ನು ಇಡೀ ವಿಶ್ವದಿಂದ ತೊಲಗಿಸಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಎ.ಕೆ ಸಿರಸಗಿ ಪಿ.ಯು ಕಾಲೇಜಿನ ಪ್ರಾಚಾರ್ಯೆ ರೇಷ್ಮಾ ಮುಜಾವರ ಮಾತನಾಡಿದರು. ಅಲ್ ಅಮೀನ್ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಎಚ್.ಎ.ಮೋಮಿನ, ಆರೋಗ್ಯ ಇಲಾಖೆಯ ಾರೂಕ್ ವಲ್ಲಿಬಾಯಿ, ಸಿದ್ದು ಬ್ಯಾಲ್ಯಾಳ, ಎಸ್.ಎಸ್ ಲಮಾಣಿ, ಸಯ್ಯದ್‌ಮೂಸಾ ಕರನೂಲ, ಹುಸೇನ ಚಾಂದಕವಟೆ, ಹರೀಶ ಎಚ್., ರುಬಿಯಾ ಮನಗೂಳಿ, ಲಕ್ಷ್ಮೀ ತಳವಾರ, ರುಕ್ಸಾನಾ ಬೇಪಾರಿ, ಪ್ರವೀಣ ಪಾಕಿ, ಹುಸೇನ ಬಾಗಲಕೊಟೆ, ಆಶಾ ಕಾರ್ಯಕರ್ತೆ ಮಹಾದೇವಿ ಬಸ್ತಿಹಾಳ ಇತರರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಸಮುದಾಯ ಆರೋಗ್ಯ ಕೇಂದ್ರ, ಬಸವೇಶ್ವರ ಪ್ರೌಢಶಾಲಾ ವಿದ್ಯಾರ್ಥಿಗಳೊಂದಿಗೆ ಗ್ರಾಮದಲ್ಲಿ ಏಡ್ಸ್ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು. ಮುಖ್ಯಶಿಕ್ಷಕ ಜೆ.ಬಿ.ಗುಮಶೆಟ್ಟಿ, ಎಸ್.ಪಿ.ರಾಣಗಟ್ಟಿ, ವಿ.ಎಂ.ಸಿಂದಗಿ, ಎಸ್.ಎಚ್.ಕೋರವಾರ, ಎಸ್.ಪಿ ಹರಿಜನ, ಪಿ.ಜಿ.ಜಾನಮಟ್ಟಿ, ಕೆ.ಎಸ್.ದೇಸಾಯಿ, ಎಸ್.ಎಸ್.ಭಜಂತ್ರಿ, ಟಿ.ಎ.ಗುಂಡಸಿ, ಎನ್.ಕೆ.ಗುಂಡಕನಾಳ ಇತರರಿದ್ದರು.