

ಬೆಳ್ತಂಗಡಿ: ದೆಹಲಿಯಿಂದ ಗ್ರಾಮದ ಬೂತ್ ಮಟ್ಟಕ್ಕೆ ನೇರ ಅನುದಾನ ಒದಗಿಸುವ ಕಲ್ಪನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಾಕಾರಗೊಳಿಸಿದ್ದಾರೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಬಿಜೆಪಿ ಮಚ್ಚಿನ ಗ್ರಾಮ ಸಮಿತಿ ಆಶ್ರಯದಲ್ಲಿ ಮಚ್ಚಿನ ಸಮುದಾಯ ಭವನದಲ್ಲಿ ಶನಿವಾರ ಗ್ರಾಮ ಪಂಚಾಯಿತಿ ಮಟ್ಟದ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಮಾತನಾಡಿದರು. ಹಿರಿಯ ಬಿಜೆಪಿ ನೇತಾರ ಶ್ರೀನಿವಾಸ ಗೌಡ ಪಲ್ಲದಕಲ ಕಾರ್ಯಕ್ರಮ ಉದ್ಘಾಟಿಸಿದರು. ಮಹಾಶಕ್ತಿ ಕೇಂದ್ರದ ಅಧ್ಯಕ್ಷ ದಾಮೋದರ ಗೌಡ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಗೌಡ ಕೈಕುರೆ, ಶ್ರೀನಿವಾಸ ರಾವ್, ಜಿಲ್ಲಾ ಉಸ್ತುವಾರಿ ಶಾರದಾ ಆರ್.ರೈ, ಶಕ್ತಿ ಕೇಂದ್ರ ಅಧ್ಯಕ್ಷ ಪದ್ಮನಾಭ ಸಾಲ್ಯಾನ್, ಕೆ.ಎಂ.ಎಫ್. ಜಿಲ್ಲಾ ನಿರ್ದೇಶಕ ಮಾಲಾಡಿ ಶಕ್ತಿ ಕೇಂದ್ರ ಪ್ರಭಾರಿಗಳ ಪದ್ಮನಾಭ ಅರ್ಕಜೆ, ಜಿ.ಪಂ. ಸದಸ್ಯೆ ಹಾಗೂ ನಾರಾವಿ ಮಹಾಶಕ್ತಿ ಕೇಂದ್ರ ಜಿಲ್ಲಾ ಪ್ರಭಾರಿ ಮಮತಾ ಎ.ಶೆಟ್ಟಿ, ಮಹಾಶಕ್ತಿ ಕೇಂದ್ರದ ಪ್ರಮುಖರಾದ ಪ್ರಶಾಂತ ಪಾರೆಂಕಿ, ವಸಂತಿ ಲಕ್ಷ್ಮಣ್, ವಿಶ್ವನಾಥ ಹಾರಬೆ ಮತ್ತಿತರರಿದ್ದರು.
ಗುರುಪ್ರಸಾದ್ ಸ್ವಾಗತಿಸಿದರು. ಕಳಿಯ ಮತ್ತು ನ್ಯಾಯತರ್ಪು, ಕೊಯ್ಯೂರು, ಲಾಲ ಗ್ರಾಮ ಸಮಿತಿಯಿಂದ ಕುಟುಂಬ ಮಿಲನ ಕಾರ್ಯಕ್ರಮ ನಡೆಯಿತು.