ಚೇತನ ಬಿಬಿಎ ಕಾಲೇಜಿಗೆ ಎಐಸಿಟಿಇ ಮಾನ್ಯತೆ

IMG_20240412_113709_455.jpg
Published on

ಹುಬ್ಬಳ್ಳಿ: ತಾಂತ್ರಿಕ ಶಿಕ್ಷಣ ಮತ್ತು ನಿರ್ವಹಣಾ ಕ್ಷೇತ್ರದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆಗಳಿಗೆ ನೀಡಲಾಗುವ ಎಐಸಿಟಿಇ ಮಾನ್ಯತೆಯು ಇಲ್ಲಿಯ ಉಣಕಲ್ಲನಲ್ಲಿರುವ ಚೇತನ ವಾಣಿಜ್ಯ, ಬಿಬಿಎ ಮತ್ತು ಬಿಸಿಎ ಕಾಲೇಜಿಗೆ ದೊರೆತಿದೆ ಎಂದು ನಿರ್ದೇಶಕ ಡಾ. ವಿ.ಎಂ. ಕೊರವಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಚೇತನ ಕಾಲೇಜು ವಿದ್ಯಾಥಿರ್ಗಳಿಗೆ ಅನೇಕ ಕೌಶಲ ಆಧಾರಿತ ಕೋರ್ಸಗಳನ್ನು ನೀಡುತ್ತ ಬಂದಿದೆ. ವಾಣಿಜ್ಯ, ನಿರ್ವಹಣೆ ಮತ್ತು ಸ್ಟಾ್ವೇರ್ ಕ್ಷೇತ್ರದಲ್ಲಿ 50ಕ್ಕೂ ಹೆಚ್ಚು ಉಚಿತ ಸರ್ಟಿಫಿಕೇಟ್ ಕೋರ್ಸ್ ಗಳನ್ನು ನೀಡುತ್ತಿದೆ ಎಂದರು.

ಉತ್ತಮ ನಾಯಕತ್ವ ಗುಣ ಬೆಳೆಸಿಕೊಳ್ಳಲು ಚೇತನೋತ್ಸವ, ಉತ್ತಮ ಶಿಕ್ಷಕ ಪ್ರಶಸ್ತಿ, ರಕ್ತದಾನ ಶಿಬಿರ, ಎನ್ಎಸ್ಎಸ್ ಶಿಬಿರ, ಪ್ರತಿಭಾನ್ವೇಷಣೆ ಪರೀೆ ಹೀಗೆ ಹಲವು ಕಾರ್ಯಕ್ರಮಗಳ ಮೂಲಕ ಶೈಕ್ಷಣಿಕ ಸ್ನೇಹಿ ವಾತಾವರಣ ನಿಮಿರ್ಸಲಾಗಿದೆ ಎಂದರು.

ಮೂಲಸೌಕರ್ಯ, ನುರಿತ ಉಪನ್ಯಾಸಕರು, ಉತ್ತಮ ಲಿತಾಂಶ, ಉದ್ಯೋಗಾವಕಾಶ ಮುಂತಾದ ಅಂಶಗಳನ್ನು ಗಮನಿಸಿ ಉನ್ನತ ಶಿಕ್ಷಣಕ್ಕೆ ಪ್ರೇರಣೆ ನೀಡಲು ಎಐಸಿಟಿಇ ಮಾನ್ಯತೆ ದೊರೆತಿರುವುದು ಸಹಕಾರಿಯಾಗಲಿದೆ ಎಂದರು.
ಏಪ್ರಿಲ್ 21ರಂದು ವಿವಿಧ ಕೋರ್ಸ್ಗಳ ಪ್ರವೇಶಕ್ಕಾಗಿ ಪ್ರತಿಭಾನ್ವೇಷಣೆ ಪರೀಕ್ಷೆ ಹಮ್ಮಿಕೊಳ್ಳಲಾಗಿದೆ. 10 ಲಕ್ಷ ರೂ. ಸ್ಕಾಲರ್ಶಿಪ್ ನೀಡಲಾಗುತ್ತಿದೆ. ಪ್ರತಿಭಾವಂತ ವಿದ್ಯಾಥಿರ್ಗಳಿಗೆ ಉಚಿತ ಪ್ರವೇಶ ನೀಡಲಾಗುತ್ತದೆ ಎಂದರು.

ಪ್ರಾಚಾರ್ಯ ಡಾ. ಅಶೋಕ ವಡಕಣ್ಣವರ, ಡಾ. ಶಿಲ್ಪಾ ಕುಲಕಣಿರ್, ಡಾ. ಪ್ರಶಾಂತ ಗಾಮನಗಟ್ಟಿ, ಪ್ರೊ. ನಿಧಿ ದೇಶಪಾಂಡೆ, ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net