ಎಸ್‌ಜೆಇಸಿಯಲ್ಲಿ ಲೈಫ್ ಸ್ಕಿಲ್ಸ್ ಕಾರ್ಯಾಗಾರ

karayagara
ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಲೈಫ್ ಸ್ಕಿಲ್ಸ್ ವರ್ಕ್‌ಶಾಪ್ ಸರಣಿಯ ಕಾರ್ಯಾಗಾರದಲ್ಲಿ ತೊಕ್ಕೊಟ್ಟು ಮಂಜುನಾಥ್ ಇಲೆಕ್ಟ್ರಿಕಲ್ಸ್‌ನ ಮಾಲೀಕ ಮಧುಸೂದನ್ ಶೆಟ್ಟಿ ಕುತ್ತಾರ್ ಮತ್ತು ಸಿಬ್ಬಂದಿ ಭರತ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.
Published on

ಮಂಗಳೂರು: ನಗರದ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಐಸಿಟಿಇ ಐಡಿಯಾ ಲ್ಯಾಬ್‌ನ ಲೈಫ್ ಸ್ಕಿಲ್ಸ್ ವರ್ಕ್‌ಶಾಪ್ ಸರಣಿಯ ದ್ವಿತೀಯ ಕಾರ್ಯಾಗಾರ ಬುಧವಾರ ನಡೆಯಿತು.

ಸಂಸ್ಥೆಯ ಉಪ ಪ್ರಾಂಶುಪಾಲ ಡಾ.ಪುರುಷೋತ್ತಮ ಚಿಪ್ಪರ್ ಕಾರ್ಯಾಗಾರ ಉದ್ಘಾಟಿಸಿದರು. ತೊಕ್ಕೊಟ್ಟು ಮಂಜುನಾಥ್ ಇಲೆಕ್ಟ್ರಿಕಲ್ಸ್‌ನ ಮಾಲೀಕ ಮಧುಸೂದನ್ ಶೆಟ್ಟಿ ಕುತ್ತಾರ್ ಮತ್ತು ಸಿಬ್ಬಂದಿ ಭರತ್ ವಿದ್ಯಾರ್ಥಿಗಳಿಗೆ ವಿದ್ಯುತ್ ಉಪಕರಣಗಳ ದುರಸ್ತಿ ಕೌಶಲಗಳ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ತರಬೇತಿ ನೀಡಿದರು. ಸೀಲಿಂಗ್ ಫ್ಯಾನ್ಸ್, ಮಿಕ್ಸಿ ಮುಂತಾದ ಗೃಹೋಪಯೋಗಿ ವಿದ್ಯುತ್ ಉಪಕರಣಗಳು ಮತ್ತು ಸ್ವಿಚ್‌ಬೋರ್ಡ್‌ನಲ್ಲಿ ವಿವಿಧ ತಂತಿ ಸಂಪರ್ಕಗಳ ಬಗ್ಗೆ ಮಾಹಿತಿ ನೀಡಿದರು. ಒಟ್ಟು 40 ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net