ಅದಾನಿ-ಅಂಬಾನಿ ಸಹಕಾರದಲ್ಲಿ ಮೋದಿ ಚುನಾವಣೆ : ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ

1411Klb02
Published on

ರಾಜ್ಯಗಳ ಬೇಡಿಕೆಗೆ ಬಿಜೆಪಿ ಬಳಿ ಉತ್ತರವಿಲ್ಲ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಮಹಾರಾಷ್ಟç ಮತ್ತು ಜಾರ್ಖಂಡ್‌ನಲ್ಲಿ ಕಾಂಗ್ರೆಸ್‌ಪರ ವಾತಾವರಣವಿದ್ದ, ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಗೆಲುವು ಪಕ್ಕಾ. ಬಿಜೆಪಿಗರು ಲೋಕಸಭೆ ಮಾದರಿಯಲ್ಲಿ ವಿಧಾನಸಭೆ ಚುನಾವಣೆ ನಡೆಸುತ್ತಿದ್ದಾರೆ. ಆದರೆ ಜನರು ನಮಗೇನು ಕೊಡುತ್ತೀರಿ ಎಂದು ಪ್ರಶ್ನಿಸುತ್ತಿದ್ದು, ಅದಕ್ಕೆ ಬಿಜೆಪಿ ಬಳಿ ಉತ್ತರವಿಲ್ಲ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕರೂ ಆದ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.

ಮಹಾರಾಷ್ಟç ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ತೆರಳುವ ಮುನ್ನ ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಗರು ೩೭೦ನೇ ವಿಧಿ ಬಗ್ಗೆ ಪದೇ-ಪದೆ ಹೇಳುತ್ತಿದ್ದಾರೆ. ಆದರೆ ಜನರ ಬೇಡಿಕೆಗಳ ಬಗ್ಗೆ ಮಾತನಾಡುತ್ತಿಲ್ಲ. ಕಾಂಗ್ರೆಸ್‌ನಿAದ ಮಹಿಳೆಯರಿಗೆ, ಪದವೀಧರರಿಗೆ ಧನಸಹಾಯ, ಉಚಿತ ಬಸ್ ಪ್ರಯಾಣ, ಬೆಂಬಲ ಬೆಲೆ (ಎಂಎಸ್‌ಪಿ) ಜಾರಿ ಮಾಡುವುದು ಸೇರಿ ಐದು ಗ್ಯಾರಂಟಿಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ. ಕರ್ನಾಟಕ ಮಾದರಿಯಲ್ಲಿ ಐದು ಗ್ಯಾರಂಟಿ ನೀಡಲಾಗಿದ್ದು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾರಿ ಮಾಡಲಾಗುವುದು ಎಂದು ಹೇಳಿದರು.

ಉದ್ಯಮಿ ಅದಾನಿ ರಾಜಕಾರಣದಲ್ಲಿ ಕೈ ಹಾಕಿದ್ದು, ದೇಶವನ್ನು ಲೂಟಿ ಮಾಡುತ್ತಿದ್ದಾನೆ. ರಿಯಾಕ್ಷನರಿ ಸರ್ಕಾರಗಳಿಗೆ ಬೆಂಬಲ ನೀಡುತ್ತಿದ್ದಾನೆ. ದೇಶದ ಸಿದ್ಧಾಂತಗಳಿಗೆ ಬೆಂಬಲ ನೀಡದೆ, ದ್ವೇಷ ಭಾಷಣ ಮಾಡುವ, ಕೋಮುವಾದಿಗಳಿಗೆ ಬೆಂಬಲ ನೀಡುವುದು ಸರಿಯಲ್ಲ. ಮೋದಿ, ಷಾ ಕ್ರೋನಿ ಕ್ಯಾಪಿಟಲಿಸಂಗೆ ಬೆಂಬಲಿಸಿ, ಅವರಿಂದ ಹಣ ಪಡೆದು ಚುನಾವಣೆ ಮಾಡುತ್ತಿದ್ದಾರೆ. ಸಂಪತ್ತು ಇದ್ದವರನ್ನೇ ಬೆಳೆಸುತ್ತಿದ್ದಾರೆ. ಇದಲ್ಲದ್ದಕ್ಕೂ ಚುನಾವಣಾ ಬಾಂಡ್ ಹಗರಣ ಜನರ ಕಣ್ಮುಂದೆ ಇದೆ ಎಂದರು.

ಶಾಸಕರಾದ ಅಲ್ಲಮಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ, ಚನ್ನಾರಡ್ಡಿ ತುನ್ನೂರ,ಮುಖಂಡರಾದ ರವಿ ಚವ್ಹಾಣ,ಜಿ.ಸಿ.ಬೆಳಮಗಿ,ಸೋಮಶೇಖರ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net