ಎಐ ನೆರವಿನಿಂದ ನಿರ್ಧಾರ ನಿಖರ,  ಸೆಮಿನಾರ್ ನಲ್ಲಿ ಪ್ರೊ. ಯು. ದಿನೇಶಕುಮಾರ್ ಹೇಳಿಕೆ

IMG_20250929_205946_87-1.jpg
Published on

ಹುಬ್ಬಳ್ಳಿ: ಎಐನಲ್ಲಿ ಸರಿಯಾದ ಪ್ರಶ್ನೆಗಳನ್ನು ಕೇಳುವ ಸಾಮರ್ಥ್ಯವು ಸರಿಯಾದ ಉತ್ತರಕ್ಕೆ ಕಾರಣವಾಗುತ್ತದೆ. ಯಾವುದೇ ಕ್ಷೇತ್ರದಲ್ಲಿ ಸಮರ್ಪಕ ನಿರ್ಧಾರ ಕೈಗೊಳ್ಳಲು ಇದು ನೆರವಾಗುತ್ತದೆ ಎಂದು ಪ್ರಸಿದ್ಧ ಶಿಕ್ಷಣ ತಜ್ಞ, ಸಂಶೋಧಕ, ಮಾರ್ಗದರ್ಶಕರಾದ ಬೆಂಗಳೂರಿನ ಐಐಎಂ ನಿರ್ದೇಶಕ ಪ್ರೊ. ಯು. ದಿನೇಶಕುಮಾರ್ ಹೇಳಿದರು.

ಇಲ್ಲಿಯ ಕೆಎಲ್ಇ ಸಂಸ್ಥೆಯ ಕಾಲೇಜ್ ಆಫ್ ಬಿಜಿನೆಸ್ ಅಡ್ಮಿನಿಸ್ಟ್ರೇಶನ್ ನಲ್ಲಿ ಏರ್ಪಡಿಸಿದ್ದ ಸೆಮಿನಾರ್ನಲ್ಲಿ ಅವರು "ಚೇಂಜಿಂಗ್ ಪ್ಯಾರಾಡಿಗ್ಮಾಸ್ ಆಫ್ ಬಿಜಿನೆಸ್, ಇಟ್ಸ್ ಫ್ಯೂಚರ್ ಇನ್ ದಿ ಇವೊಲ್ವಿಂಗ್ ಏಜ್ ಆಫ್ ಎಐ, ಇಟ್ಸ್ ಇಂಪ್ಯಾಕ್ಟ್ ಆನ್ ದಿ ಫ್ಯೂಚರ್ ಆಫ್ ಬಿಜಿನೆಸ್' ವಿಷಯದ ಕುರಿತು ಮುಖ್ಯ ಭಾಷಣ ಮಾಡಿದರು.

ಭವಿಷ್ಯದ ವ್ಯವಹಾರ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸುವ ಹಾಗೂ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಸುಧಾರಿಸುವ ಮತ್ತು ಗ್ರಾಹಕರ ಅನುಭವಗಳನ್ನು ವೈಯಕ್ತಿಕಗೊಳಿಸಿ ಹೆಚ್ಚು ಪ್ರಯೋಜನ ಪಡೆಯಲು ಅನುಕೂಲವಾಗಲಿದೆ ಎಂದರು.

ಭವಿಷ್ಯದ ಮೇಲೆ ಎಐ ಪ್ರಭಾವ ಬಹಳಷ್ಟಿರುತ್ತದೆ ಎಂದ ಅವರು, ವಿದ್ಯಾರ್ಥಿಗಳ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದರು. ಎಐ ನಲ್ಲಿ ವೃತ್ತಿ ಜೀವನ ಕಂಡುಕೊಳ್ಳುವ ಬಗ್ಗೆ ಹೊಳವುಗಳನ್ನು ತಿಳಿಸಿಕೊಟ್ಟರು.

ಕರ್ನಾಟಕ ವಿಶ್ವವಿದ್ಯಾಲಯ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರನ್ನು ಪ್ರೊ. ಯು. ದಿನೇಶಕುಮಾರ್ ಸನ್ಮಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net