

ಹೊಸಕೋಟೆ : ತಾಲೂಕಿನಲ್ಲಿ ಇನ್ಫೋಸಿಸ್ ಸಂಸ್ಥೆ ಸಹಯೋಗದಲ್ಲಿ 28 ಮ್ಯಾಗ್ನೆಟ್ ಶಾಲೆ ತೆರೆಯುವ ಮೂಲಕ ಎಲ್ಕೆಜಿಯಿಂದ ದ್ವೀತಿಯ ಪಿಯುಸಿವರೆಗೆ ಒಂದೇ ಸೂರಿನಡಿ ಶಿಕ್ಷಣ ನೀಡಲು ಕ್ರಮವಹಿಸಲಾಗಿದೆ ಎಂದು ಕಿಯೋನಿಕ್ಸ್ ಅಧ್ಯಕ್ಷ, ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ಶ್ರೀ ಲಕ್ಷಿ$್ಮ ಸಭಾಂಗಣದಲ್ಲಿ ಭಾನುವಾರ ಹೊಸಕೋಟೆ ಟೌನ್ ಒಕ್ಕಲಿಗರ ಸಂದಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗಿಂತ ಎರಡು ಪಟ್ಟು ವಿದ್ಯಾರ್ಥಿಗಳು ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದು, ಪಾಲಕರಿಗೆ ಖಾಸಗಿ ಶಾಲೆಗೆ ಕಟ್ಟುವ ಶುಲ್ಕದ ಹೊರೆ ತಗ್ಗಿಸಲು ಸರ್ಕಾರದ ಮ್ಯಾಗ್ನೆಟ್ ಯೋಜನೆಯೊಂದಿಗೆ ಇನ್ಫೋಸಿಸ್ ಸಂಸ್ಥೆ ಸಹಯೋಗದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ ಎಂದ ಅವರು, ಒಕ್ಕಲಿಗ ಸಮುದಾಯದ ಮಕ್ಕಳು ಉನ್ನತ ಶಿಕ್ಷಣ ಪಡೆದು ಉದ್ಯೋಗ ಪಡೆಯುವ ಜತೆಗೆ ಉದ್ಯಮಗಳ ಸ್ಥಾಪನೆಗೂ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಜಗತ್ತಿನಲ್ಲಿ ಎಐ ತಂತ್ರಜ್ಞಾನ ದಿನೇದಿನೆ ಬೆಳೆಯುತ್ತಿದ್ದು, ಅದಕ್ಕೆ ಹೊಂದಿಕೊಳ್ಳುವಂತೆ ವಿದ್ಯಾರ್ಥಿಗಳು ತಯಾರಾಗಬೇಕು. ಎಐನಿಂದ ಮುಂದಿನ ದಿನಗಳಲ್ಲಿ ಉದ್ಯೋಗ ಕಡಿತಗೊಳ್ಳುತ್ತದೆ ಎಂಬ ಭಾವನೆ ಇದೆ. ಆದರೆ ಎಐ ತಂತ್ರಜ್ಞಾನದಿಂದ ಇನ್ನೂ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ ಮಾತನಾಡಿ, ಮಕ್ಕಳು ಶಿಕ್ಷಣದೊಂದಿಗೆ ಸಂಸ್ಕಾರ, ಸಂಸತಿ ಕಲಿಯಬೇಕು. ತಾಲೂಕಿನಲ್ಲಿ ಒಕ್ಕಲಿಗ ಸಮುದಾಯದ 503 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀೆ ಬರೆದಿದ್ದು, 499 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹಾಗಾಗಿ ತಾಲೂಕಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಭವಿಷ್ಯ ಉಜ್ವಲಗೊಳಿಸುವ ನಿಟ್ಟಿನಲ್ಲಿ ಶಾಸಕರು ಇನ್ಫೋಸಿಸ್ ಸಹಯೋಗದಲ್ಲಿ ಮ್ಯಾಗ್ನೆಟ್ ಶಾಲೆ ತೆರೆಯಲು ಯೋಜನೆ ರೂಪಿಸಿದ್ದಾರೆ. ರಾಜ್ಯದಲ್ಲೇ ಮೊದಲ ಬಾರಿಗೆ ನಮ್ಮ ತಾಲೂಕನ್ನು ಆಯ್ಕೆ ಮಾಡಿ 50 ಲಕ್ಷ ರೂ. ವೆಚ್ಚದಲ್ಲಿ 28 ಶಾಲೆ ತೆರೆಯಲಾಗಿದೆ ಎಂದು ಹೇಳಿದರು.
ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿ ಪಡೆದ 155 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಬಹುಮಾನ ನೀಡಿ ಗೌರವಿಸಲಾಯಿತು.ರಾಜ್ಯ ಒಕ್ಕಲಿಗರ ಸಂದ ನಿರ್ದೇಶಕ ರಾಜಶೇಖರ ಗೌಡ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೆ.ಕೃಷ್ಣ ಮೂರ್ತಿ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸುನೀಲ್, ಬಿಇಒ ಪದ್ಮನಾಭ್, ನಿವೃತ್ತ ಇಒ ಡಾ.ಸಿ.ಎನ್.ನಾರಾಯಣಸ್ವಾಮಿ, ಎಲ್ಜಿ ೌಂಡೇಷನ್ ಅಧ್ಯಕ್ಷ ಲಕ್ಷ$್ಮಣ್ ಗೌಡ, ಮುಖಂಡರಾದ ಕೋಡಿಹಳ್ಳಿ ಸುರೇಶ್, ಟಿ.ನಾಗರಾಜ್, ನಂಜುಂಡೇಗೌಡ, ಸೋಮಣ್ಣ, ಬಚ್ಚಣ್ಣ ಇದ್ದರು.
ಅಮೆರಿಕದ ಉದ್ಯಮಿಗಳನ್ನು ಭೇಟಿಯಾದಾಗ ಅವರ ಬೇಡಿಕೆ ಉಚಿತ ಭೂಮಿ, ವಿದ್ಯುತ್ ಅಥವಾ ಸರ್ಕಾರದ ಸಬ್ಸಿಡಿಯಾಗಿರಲಿಲ್ಲ. ಕೌಶಲ ಹೊಂದಿರುವ ಉದ್ಯೋಗಿಗಳು ಬೇಕೆಂದು ಬೇಡಿಕೆ ಇಟ್ಟರು. ಅದರಂತೆ 7500 ಕೋಟಿ ಬಂಡವಾಳ ಹರಿದು ಬರುತ್ತಿದ್ದು, ಇದರಿಂದ 9 ಸಾವಿರಕ್ಕೂ ಹೆಚ್ಚು ಸ್ಥಳಿಯರಿಗೆ ಉದ್ಯೋಗ ದೊರೆಯಲಿದೆ. > ಶರತ್ ಬಚ್ಚೇಗೌಡ ಶಾಸಕ, ಕಿಯೋನಿಕ್ಸ್ ಅಧ್ಯಕ್ಷ