

ಮೈಸೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 625 ಅಂಕಗಳನ್ನು ಪಡೆದ ರಾಜ್ಯದ ನಾಲ್ವರು ವಿದ್ಯಾರ್ಥಿಗಳಿಗೆ ನಗರದ ಆಲನಹಳ್ಳಿ ಬಡಾವಣೆಯ ಶಾಶ್ವತ ಸೇವಾ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆಯಿಮಾತಾಜೀ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಬೆಂಗಳೂರಿನ ಭೂಮಿಕಾ, ಮುದ್ದೇಬಿಹಾಳದ ಭೀಮನಗೌಡ ಪಾಟೀಲ್, ಸವದತ್ತಿಯ ಅನುಪಮಾ ಹೀರೆಹೋಳ ಹಾಗೂ ಚಿಕ್ಕಬಳ್ಳಾಪುರದ ಯಶಸ್ ಅವರಿಗೆ ತಲಾ 15 ಸಾವಿರ ರೂ. ನಗದು ಹಾಗೂ ಆಯಿಮಾತಾಜೀ ಪ್ರತಿಭಾ ಪುರಸ್ಕಾರ ನೀಡಲಾಯಿತು. ಇದೇ ಸಂದರ್ಭ 2021-22, 2022-23ನೇ ಸಾಲಿನಲ್ಲಿ ಶಾಶ್ವತ ಸೇವಾ ಶಾಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಎನ್. ಸಂಜನಾ, ಎಂ. ಕೃತಿಕಾ, ಎಂ. ಐಶ್ವರ್ಯ, ಎಸ್. ರಿತುಪರ್ಣ ಅವರನ್ನು ಗೌರವಿಸಲಾಯಿತು.
ಚಿಕ್ಕಮಂಗಳೂರಿನ ಶ್ರೀ ಬಸವಾನಂದಮೂರ್ತಿ ಶರಣರು ಸಾನ್ನಿಧ್ಯ ವಹಿಸಿದ್ದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಶಾಶ್ವತ ಸೇವಾ ಟ್ರಸ್ಟ್ ಕಾರ್ಯದರ್ಶಿ ಎಂ.ಆರ್. ಚೌಧರಿ, ನಿವೃತ್ತ ಪ್ರಾಂಶುಪಾಲ ಶಿ. ಕುಮಾರಸ್ವಾಮಿ, ಸಾಹಿತಿ ಸೋಸಲೆ ಗಂಗಾಧರ್, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಇಎನ್‌ಟಿ ಪ್ರಾಧ್ಯಾಪಕ ಡಾ.ಎಚ್. ಸುಂದರರಾಜು, ತಾಲೂಕು ವಲಯ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಮಹದೇವ, ಬಿಇಒ ಕಚೇರಿಯ ಶಿಕ್ಷಣ ಸಂಯೋಜಕ ಯು.ಜಿ. ಮೋಹನಕುಮಾರ್ ಆರಾಧ್ಯ, ಆಲನಹಳ್ಳಿ ಕ್ಲಸ್ಟರ್ ಕ್ಷೇತ್ರ ಸಂಪನ್ಮೂಲಾಧಿಕಾರಿ ಮಹದೇವಸ್ವಾಮಿ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ದೇವರಾಜ್ ಪಿ. ಚಿಕ್ಕಹಳ್ಳಿ, ಎನ್‌ಐಇ ಸಹಾಯಕ ಪ್ರಾಧ್ಯಾಪಕ ಡಾ. ಸಿ.ವಿ. ಆನಂದ್ ಹುಲಗಬಾಳಿ, ವೀರಗಾಸೆ ಕಲಾವಿದ ಕಿರಾಳು ಮಹೇಶ್, ಜೂನಿಯರ್ ರಾಜ್ ಕುಮಾರ್ ಖ್ಯಾತಿಯ ರಮೇಶ್ ಕುಮಾರ್, ಅಧ್ಯಾಪಕರಾದ ಎಡೆಯೂರು ಸಮೀವುಲ್ಲಾ, ಎಂ. ನರೇಂದ್ರ ಇದ್ದರು.