ಮೈಸೂರು ವಿವಿಯಲ್ಲಿ ‘ಎಐ ಆ್ಯಂಕರ್’, ಸುದ್ದಿ ನಿರೂಪಣೆ ಮಾಡಿದ ಮಾನಸ…!

mysore university
Published on

ಮೈಸೂರು: ಮೈಸೂರು ವಿಶ್ವ ವಿದ್ಯಾಲಯದ ಪತ್ರಿಕೋದ್ಯಮ ವಿಭಾಗಕ್ಕೂ ಕೃತಕ ಬುದ್ಧಿಮತ್ತೆ ಕಾಲಿರಿಸಿದ್ದು, ಗುರುವಾರ ಪ್ರಾಯೊಗಿಕವಾಗಿ ಎಐ ಆ್ಯಂಕರ್ ಮೂಲಕ ವಾರ್ತೆ ವಾಚನ ಮಾಡಲಾಯಿತು.

ವಿಭಾಗದ ಮುಖ್ಯಸ್ಥೆ ಡಾ. ಸಪ್ನಾ ನಾಯಕ್ ಅವರ ಮಾರ್ಗದರ್ಶನದಲ್ಲಿ ವಿಭಾಗದ ಟೆಕ್ನಿಕಲ್ ಅಸಿಸ್ಟೆಂಟ್ ಶ್ರೀನಾಥ್ ಅರಸ್ ಎಐ ಆ್ಯಂಕರ್ ಅನ್ನು ಅಭಿವೃದ್ಧಿ ಪಡಿಸಿದ್ದಾರೆ. ಎಐ ಆ್ಯಂಕರ್‌ಗೆ ಮಾನಸ ಎಂಬ ಹೆಸರು ಇಡಲಾಗಿದೆ. ಕೆಲವು ದಿನಗಳ ಕಾಲ ಪ್ರಾಯೋಗಿಕ ಪರೀಕ್ಷೆ ನಂತರ ನಿರಂತರವಾಗಿ ಎಐ ಆ್ಯಂಕರ್ ಬಳಸಿಕೊಂಡು ಸುದ್ದಿ ಪ್ರಸಾರ ಬಿತ್ತರಿಸಲು ಉದ್ದೇಶಿಸಲಾಗಿದೆ.

‘ರಾಜ್ಯದ ವಿವಿಧ ವಿಶ್ವ ವಿದ್ಯಾಲಯಗಳಲ್ಲಿ ಈಗಾಗಲೇ ಎಐ ಆ್ಯಂಕರ್‌ಅನ್ನು ಪರಿಚಯಿಸಲಾಗಿದೆ. ಅದೇ ರೀತಿ ಮೈಸೂರು ವಿಶ್ವ ವಿದ್ಯಾಲಯದ ಪತ್ರಿಕೋದ್ಯಮ ವಿಭಾಗಕ್ಕೂ ಎಐ ಆ್ಯಂಕರ್‌ಅನ್ನು ಪರಿಚಯಿಸಿದ್ದೇವೆ. ಕೃತಕ ಬುದ್ಧಿಮತ್ತೆಯು ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಕಸಿದುಕೊಳ್ಳುತ್ತದೆ. ಹಾಗಂತ ಜಗತ್ತು ಮುಂದುವರೆಯುವಾಗ ನಾವು ಹಿಂದುಳಿಯಲೂ ಸಾಧ್ಯವಿಲ್ಲ. ಈ ಹಿನ್ನೆಲೆತಯಲ್ಲಿ ನಮ್ಮಲ್ಲೂ ಕೃತಕ ಬುದ್ಧಿಮತ್ತೆ ಬಳಕೆ ಮಾಡಿದ್ದೇವೆ’ ಎಂದು ವಿಭಾಗದ ಮುಖ್ಯಸ್ಥೆ ಡಾ. ಸಪ್ನಾ ನಾಯಕ್ ‘ವಿಜಯವಾಣಿ’ಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net