

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಇಲ್ಲದಿದ್ದರೆ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಅವರು ಈ ದೇಶವನ್ನು ಮಾರಿ ಬಿಡುತ್ತಾರೆ. ನಮಗೆ ಮೋದಿ ಬೇಕು. ಆದರೆ, ಇಲ್ಲಿಯ ಬಿಜೆಪಿ ಸರಿ ಇಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಾದ ವಿತರಣೆಯಲ್ಲೂ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಪ್ರಸಾದ ವಿತರನೆಗೆ ಪ್ರಮಾಣೀಕರಣದ ಅಗತ್ಯವಿಲ್ಲ. ನಿಯಮ ಬರೀ ಹಿಂದುಗಳಿಗೇಕೆ ಅನ್ವಯ? ಕಾಂಗ್ರೆಸ್‌ನಿಂದ ಪದೇ ಪದೆ ಹಿಂದು ವಿರೋಧಿ ನೀತಿ ಜಾರಿಯಾಗುತ್ತಿದೆ ಎಂದು ದೂರಿದರು.
ಚನ್ನಮ್ಮ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಎಸ್‌ಡಿಪಿಐ ವಿರೋಧ ಮಾಡುತ್ತಿರುವುದು ಸರಿಯಲ್ಲ. ಎಸ್‌ಡಿಪಿಐ ಕೊಲೆಗಡುವ, ದೇಶದ್ರೋಹಿ ಪಕ್ಷ. ಹಿಂದುಗಳ ಕೊಲೆಯಲ್ಲಿ ಎಸ್‌ಡಿಪಿಐನವರು ಭಾಗಿಯಾಗಿದ್ದಾರೆ. ಪಿಎಫ್‌ಐ ಬ್ಯಾನ್ ಮಾಡಿದಂತೆ ಎಸ್‌ಡಿಪಿಐ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದರು.
ಡಿಜೆ ವಿಚಾರದಲ್ಲಿ ಸರ್ಕಾರ ಕಿರಿಕಿರಿ ಮಾಡುತ್ತಿದೆ. ಇದು ಸರಿಯಲ್ಲ. ಡಿಜೆ ಅಲ್ಲ, ಆಜಾನ್ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಆಜಾನ್ ವಿಚಾರದಲ್ಲಿ ಎಲ್ಲ ಪಕ್ಷದವರೂ ಅಷ್ಟೇ. ಬಿಜೆಪಿಯವರು ಏನು ಸಾಚಾ ಅಲ್ಲ. ನಿರ್ಲಜ್ಜರು. ಅವರಿಗೆ ಹಿಂದುಗಳು ಬೇಕು. ಆಜಾನ್ ವಿರುದ್ಧ ಹೋರಾಟ ಮಾಡಿದಾಗ ಇದೇ ಬಿಜೆಪಿಯವರು ಬಂಧಿಸಿದರು. ನೀವು ಡಬಲ್ ಡಿಜೆ ಹಚ್ಚಬೇಕು ಎಂದು ಸಾರ್ವಜನಿಕರಿ ವಿನಂತಿಸಿದರು.