ಮೂರನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ

11SDPR (1)_
Published on

ಸಿದ್ದಾಪುರ: ನಿರಾಶ್ರಿತರಿಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ ನಿವೇಶನ ಹೋರಾಟ ಸಮಿತಿ ನೇತೃತ್ವದಲ್ಲಿ ಸಿದ್ದಾಪುರ ಗ್ರಾಪಂ ಕಚೇರಿ ಎದುರು ನಡೆಸುತ್ತಿರುವ ಅಹೋ ರಾತ್ರಿ ಮುಷ್ಕರ ಎರಡನೇ ದಿನವೂ ಮುಂದುವರೆಯಿತು.

ಕರಡಿಗೋಡು ಮತ್ತು ಗುಹ್ಯ ಗ್ರಾಮದ ನದಿಯಂಚಿನ ನಿವಾಸಿಗಳು ಕಾವೇರಿ ನದಿ ನೀರಿನ ಪ್ರವಾಹಕ್ಕೆ ತುತ್ತಾಗಿ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದು ಶಾಶ್ವತ ಪರಿಹಾರ ಸಿಗುವವರೆಗೆ ಧರಣಿ ಮುಂದುವರಿಸುವುದಾಗಿ ತಿಳಿಸಿದ್ದಾರೆ. ಸೋಮವಾರ ರಾತ್ರಿ ಮಡಿಕೇರಿ ಹಿತರಕ್ಷಣಾ ವೇದಿಕೆ ಹಾಗೂ ಸಿಪಿಎಂ ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿ ಧರಣಿ ಕುಳಿತಿದ್ದರು.

ಪ್ರತಿಭಟನೆಯಲ್ಲಿ ರೆಜಿತ್ ಕುಮಾರ್, ಮುಸ್ತಫಾ ಕ್ರಾಂತಿಗೀತೆ ಹಾಡಿದರು. ಬೆಳಗಿನಿಂದ ಸಂಜೆ ತನಕ ಮಹಿಳೆಯರು ಧರಣಿ ಕುಳಿತರೆ ರಾತ್ರಿ ಪುರುಷರು ಧರಣಿ ನಡೆಸಿದರು. ಎರಡನೆಯ ದಿನವಾದ ಮಂಗಳವಾರ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರತಿಭಟನೆಗೆ ಸಾಥ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net