ಅಹಮದಾಬಾದ್ - ಮಂಗಳೂರು ವಿಶೇಷ ರೈಲು ಜುಲೈ ಅಂತ್ಯದವರೆಗೆ ವಿಸ್ತರಣೆ
ಸಾಂದರ್ಭಿಕ ಚಿತ್ರ
Published on:
Copied
Follow Us
ಮಂಗಳೂರು : ಪ್ರಯಾಣಿಕರ ಹೆಚ್ಚಿದ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಅಹಮದಾಬಾದ್ - ಮಂಗಳೂರು ನಡುವೆ ಸಂಚರಿಸುವ ವಾರದ ವಿಶೇಷ ರೈಲುಗಳ ಸೇವೆಯನ್ನು ಭಾರತೀಯ ರೈಲ್ವೆ ಮತ್ತೊಮ್ಮೆ ವಿಸ್ತರಿಸಿದೆ.
ರೈಲು ಸಂಖ್ಯೆ 09424 ಅಹಮದಾಬಾದ್ ಜಂಕ್ಷನ್ - ಮಂಗಳೂರು ಜಂಕ್ಷನ್ ವಾರದ ವಿಶೇಷ ರೈಲು ಪ್ರತಿ ಶುಕ್ರವಾರ ಸಂಚರಿಸಲಿದ್ದು, ಈ ಹಿಂದೆ ಮೇ 29ರ ವರೆಗೆ ಪ್ರಕಟಿಸಲಾಗಿದ್ದ ಸೇವೆಯನ್ನು ಇದೀಗ ಜುಲೈ 3ರಿಂದ ಜುಲೈ 31ರ ವರೆಗೆ ಇನ್ನೂ 5 ಹೆಚ್ಚುವರಿ ಟ್ರಿಪ್‌ಗಳಿಗೆ ವಿಸ್ತರಿಸಲಾಗಿದೆ.
ರೈಲು ಸಂಖ್ಯೆ 09423 ಮಂಗಳೂರು ಜಂಕ್ಷನ್ - ಅಹಮದಾಬಾದ್ ಜಂಕ್ಷನ್ ವಾರದ ವಿಶೇಷ ರೈಲು ಪ್ರತಿ ಶನಿವಾರ ಸಂಚರಿಸಲಿದ್ದು, ಮೇ 30, ರ ವರೆಗೆ ಇದ್ದ ಸೇವೆಯನ್ನು ಜುಲೈ 4ರಿಂದ ಆಗಸ್ಟ್ 1 ರ ವರೆಗೆ ಇನ್ನೂ 5 ಟ್ರಿಪ್‌ಗಳಿಗೆ ವಿಸ್ತರಿಸಲಾಗಿದೆ.
ಇದರ ಜೊತೆಗೆ, 09424 ಅಹಮದಾಬಾದ್ - ಮಂಗಳೂರು ವಿಶೇಷ ರೈಲು ಮಂಗಳೂರು ಜಂಕ್ಷನ್‌ಗೆ ಆಗಮಿಸುವ ಸಮಯವನ್ನು ಪರಿಷ್ಕರಿಸಲಾಗಿದ್ದು, ಇನ್ನು ಮುಂದೆ ರೈಲು ರಾತ್ರಿ 9 ಗಂಟೆಗೆ ಮಂಗಳೂರು ಜಂಕ್ಷನ್‌ಗೆ ತಲುಪಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.