

ಹುಬ್ಬಳ್ಳಿ: ಜೀತೋ ಹುಬ್ಬಳ್ಳಿ ಶಾಖೆ ವತಿಯಿಂದ ನಗರದಲ್ಲಿ ಸೋಮವಾರ ಅಹಿಂಸಾ ಓಟ ನಡೆಯಿತು.
ನಿವೃತ್ತ ಪೊಲೀಸ್ ಅಧಿಕಾರಿ ಶ್ಯಾಮರಾವ ಸಜ್ಜನ, ಶಾಖೆ ಅಧ್ಯಕ್ಷ ಅನಿಲಕುಮಾರ ಮಾತನಾಡಿ, ಜಗತ್ತಿಗೆ ಅಹಿಂಸೆ, ಸತ್ಯ, ಧರ್ಮ ಬೇಕು. ಅಹಿಂಸೆ ಹೊರತು ಸಮ ಸಮಾಜ ನಿರ್ಮಾಣ ಅಸಾಧ್ಯ ಎಂದರು. ನಿವೃತ್ತ ಎಸಿಪಿ ಅಡಿವೆಪ್ಪ ಬಡಿಗೇರ ಧ್ವಜ ಹಾರಿಸುವುದರ ಮೂಲಕ ಓಟಕ್ಕೆ ಚಾಲನೆ ನೀಡಿದರು. 10 ಕೆ, 5 ಮತ್ತು 3 ಕೆ ಓಟದಲ್ಲಿ ಸುಮಾರ 450ಕ್ಕೂ ಜನರು ಭಾಗವಹಿಸಿದ್ದರು.
ಪ್ರಮುಖರಾದ ಪ್ರಕಾಶ ಕೊಠಾರಿ, ವೀರೇಂದ್ರ ಛೇಡಾ, ಪುರಾನ ನಹತಾ, ಸುರೇಶ ಜೈನ್, ಭಾರತ ಪಟ್ವಾರಿ, ಪ್ರವೀಣ ಚೌಧರಿ,
ಗೀತಾ ಛೇಡಾ, ಶೀತಲ್ ಶಾ, ನವೀನ್ ಖಿವೇಸ್ರಾ, ಸಂಗೀತಾ ಜೈನ್, ಲಲಿತಾ ಜೈನ್, ರಾಜನ್ ಜೈನ್, ಆಶಿಶ್ ನಹತಾ, ಧರ್ಮೇಂದ್ರ ಜೈನ್, ಅಕ್ಷತ್ ಜೈನ್ ಇತರರು ಇದ್ದರು.