ಕೃಷಿಗೆ ಸಿಗಲಿದೆ ಹೆಚ್ಚು ಆದ್ಯತೆ

8Kagavad1
Published on

ಕಾಗವಾಡ: ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಬೇಸಾಯಕ್ಕೆ ಹೆಚ್ಚು ಆದ್ಯತೆ ದೊರೆಯಲಿದೆ ಎಂದು ಕವಲಗುಡ್ಡದ ಸಿದ್ಧಯೋಗಿ ಆಶ್ರಮದ ಅಮರೇಶ್ವರ ಮಹಾರಾಜರು ಹೇಳಿದರು.

ತಾಲೂಕಿನ ಮಂಗಾವತಿ ಗ್ರಾಮದಲ್ಲಿ ನಿವೃತ್ತ ಮತ್ತು ಸೇವಾನಿರತ ನೌಕರರ ಗ್ರಾಮ ಕಲ್ಯಾಣ ಸಂಘದ ವತಿಯಿಂದ ಗ್ರಾಮದ ಹಿರಿಯ ಪುರುಷ ಮತ್ತು ಮಹಿಳಾ ಕೃಷಿಕರಿಗೆ ಮಂಗಳವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಬೆವರು ಸುರಿಸಿ ದುಡಿಯುವ

ಶ್ರಮಜೀವಿಗಳಿಗೆ ವಿಶೇಷ ಮನ್ನಣೆ ದೊರೆಯಬೇಕು. ಈ ನಿಟ್ಟಿನಲ್ಲಿ ಸಂಘವು ರೈತರನ್ನು ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.

ಮುಖಂಡ ಕೆ.ಆರ್.ಪಾಟೀಲ ಮಾತನಾಡಿ, ಸನ್ಮಾನಿತಗೊಂಡ ಮಹಿಳೆಯರು ಕಷ್ಟದಲ್ಲಿ ಜೀವನ ಸಾಗಿಸಿ ಮಾದರಿಯಾಗಿದ್ದಾರೆ ಎಂದು ಹೇಳಿದರು. 50 ರೈತರನ್ನು ಸನ್ಮಾನಿಸಲಾಯಿತು. ಪ್ರೊ.ಆರ್.ಬಿ.ಪಾಟೀಲ, ರುದ್ರಗೌಡ ಪಾಟೀಲ, ಡಾ.ಕೆ.ಎನ್. ದೊಡ್ಡಮನಿ, ಆದಾಯ ತೆರಿಗೆ ಇಲಾಖೆ ನಿವೃತ್ತ ಸಹಾಯಕ ಆಯುಕ್ತ ಕೆ.ಕೆ.ಸುಂಟೆ ವಂದಿಸಿದರು. ದತ್ತಾತ್ರೇಯ ಕುಂಬಾರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net