

ವಿಜಯವಾಣಿ ಸುದ್ದಿಜಾಲ ಧಾರವಾಡ
ಮೊಂಡು ವಾದಕ್ಕೆ ಜೋತು ಬಿದ್ದಿದ್ದ ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಆಡಳಿತಾಽಕಾರಿಗಳು ಕೊನೆಗೂ ಎಚ್ಚೆತ್ತುಕೊಂಡಿದ್ದಾರೆ. ಕೃಷಿ ಮೇಳದ ಆಹ್ವಾನ ಪತ್ರಿಕೆಯಲ್ಲಿ ಆಗಿದ್ದ ಶಿಷ್ಟಾಚಾರ ಉಲ್ಲಂಘನೆಯನ್ನು ಸರಿಪಡಿಸಿಕೊಂಡಿದ್ದಾರೆ. ಕುಲಸಚಿವರ ಹೆಸರನ್ನು ಪುನರ್ ಮುದ್ರಿಸಿ ಆಮಂತ್ರಣ ಪತ್ರಿಕೆಗಳನ್ನು ಮರು ಹಂಚಿಕೆ ಮಾಡುತ್ತಿದ್ದಾರೆ.
ಕೃಷಿ ಮೇಳದ ಆಹ್ವಾನ ಪತ್ರಿಕೆಯಲ್ಲಿ ಕುಲಸಚಿವೆ ಜಯಲಕ್ಷ್ಮೀ ರಾಯಕೋಡ ಅವರ ಹೆಸರು ಮುದ್ರಿಸಿರಲಿಲ್ಲ. ಅನೇಕ ವರ್ಷಗಳಿಂದ ನಡೆಯುತ್ತಿದ್ದ ಈ ಅಚಾತುರ್ಯವನ್ನು ಎಲ್ಲ ಕುಲಪತಿಗಳು ಮುಂದುವರಿಸಿಕೊ0ಡು ಹೋಗುತ್ತಿದ್ದರು. ಈ ಪದ್ಧತಿಯನ್ನು ಕುಲಪತಿ ಡಾ. ಪಿ.ಎಲ್. ಪಾಟೀಲ ಸಹ ಸಮರ್ಥಿಸಿಕೊಂಡಿದ್ದರು. ಈ ಕುರಿತು ವಿಜಯವಾಣಿ `ಕೃಷಿ ವಿವಿಯಲ್ಲಿ ಶಿಷ್ಟಾಚಾರ ಉಲ್ಲಂಘನೆ' ಎಂಬ ವರದಿ ಪ್ರಕಟಿಸಿತ್ತು. ರಾಜ್ಯ ಸರ್ಕಾರ ಮತ್ತು ಕೃಷಿ ವಿಶ್ವವಿದ್ಯಾಲಯ ನಡುವಿನ ಆಡಳಿತಾತ್ಮಕ ಕೊಂಡಿಯಾಗಿರುವ ಕುಲಸಚಿವರಿಗೆ ಅಽಕೃತ ಆಹ್ವಾನ ಇಲ್ಲದಿರುವುದನ್ನು ಬೆಳಕಿಗೆ ತಂದಿತ್ತು. ಕೃಷಿ ಮೇಳ ವೈಜ್ಞಾನಿಕವಾಗಿ ವಿಸ್ತರಣೆ, ಸಂಶೋಧನೆಗಳನ್ನು ಒಳಗೊಂಡ ರೈತರ ಕಾರ್ಯಕ್ರಮ ಆಗಿದ್ದರಿಂದ ಕುಲಸಚಿವರ ಹೆಸರು ನಮೂದಿಸಿಲ್ಲ ಎಂದು ಕೃಷಿ ಮೇಳದ ಅಧ್ಯಕ್ಷ ಹಾಗೂ ವಿಸ್ತರಣಾ ನಿರ್ದೇಶಕ ಡಾ. ಎಸ್.ಎಸ್. ಅಂಗಡಿ ಸಬೂಬು ನೀಡಿದ್ದರು.
ರಾಯಚೂರು, ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯಗಳ ಕೃಷಿ ಮೇಳದ ಆಮಂತ್ರಣ ಪತ್ರಿಕೆಯಲ್ಲಿ ಕುಲಸಚಿವರ ಹೆಸರು ಇರುವುದನ್ನು ವಿಜಯವಾಣಿ ಬೆಳಕಿಗೆ ತಂದಿತ್ತು. ವರದಿಯ ನಂತರ ಎಚ್ಚೆತ್ತುಕೊಂಡ ಆಡಳಿತಾಽಕಾರಿಗಳು ಮೇಳದ ಆಮಂತ್ರಣ ಪತ್ರಿಕೆಯಲ್ಲಿ ಕುಲಸಚಿವೆ ಜಯಲಕ್ಷ್ಮೀ ರಾಯಕೋಡ ಅವರ ಹೆಸರನ್ನು ಮುದ್ರಿಸಿದೆ.