ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಲಿ

Kurgodu Agri Association
ಕುರುಗೋಡಿನಲ್ಲಿ ಶುಕ್ರವಾರ ಎಐಕೆಕೆಎಂಎಸ್ ರೈತ ಸಂಘಟನೆಯಿಂದ ಹಮ್ಮಿಕೊಂಡಿದ್ದ 2ನೇ ತಾಲೂಕು ಮಟ್ಟದ ಸಮ್ಮೇಳನದ ಜಾಥಾ ನಡೆಯಿತು.ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ ಜಡಗಣ್ಣ, ಜಿಲ್ಲಾ ಅಧ್ಯಕ್ಷ ಗೋವಿಂದ್, ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ,ಕೋಳೂರು ಲಿಂಗಪ್ಪ, ಹೊನ್ನೂರಪ್ಪ, ಕಾಸಿಂಸಾಬ್ ಇದ್ದರು.
Published on

ಕುರುಗೋಡು: ರೈತರು, ಕೃಷಿ ಕಾರ್ಮಿಕರ ಸಮಸ್ಯೆಗಳನ್ನು ಕಡೆಗಣಿಸಿರುವ ಸರ್ಕಾರ ಅವರ ಆರೋಗ್ಯ, ಮಕ್ಕಳ ಶಿಕ್ಷಣದತ್ತ ಗಮನಹರಿಸುವಲ್ಲಿ ವಿಫಲವಾಗಿದೆ ಎಂದು ಎಐಕೆಕೆಎಂಎಸ್ ಸಂಘಟನೆ ಕಾರ್ಯದರ್ಶಿ ಎಂ.ದೇವದಾಸ್ ದೂರಿದರು.

ಪಟ್ಟಣದ ಶ್ರೀ ದೊಡ್ಡಬಸವೇಶ್ವರ ದೇವಸ್ಥಾನದ ರೈತ ಸಮುದಾಯ ಭವನದಲ್ಲಿ ಶುಕ್ರವಾರ ಎಐಕೆಕೆಎಂಎಸ್ ರೈತ ಸಂಘಟನೆ ಹಮ್ಮಿಕೊಂಡಿದ್ದ 2ನೇ ತಾಲೂಕು ಮಟ್ಟದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ದೇಶದ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಇಲ್ಲ. ಎಲ್ಲವೂ ಬಡವರಿಂದ ದೂರವಾಗಿದೆ. ಎಲ್ಲ ಶ್ರಮಿಕರು ಒಂದಾಗಿ, ಈ ವ್ಯವಸ್ಥೆ ವಿರುದ್ಧ ಹೋರಾಟ ಕಟ್ಟಿ, ಹೊಸ ಸಮ ಸಮಾಜ ಕಟ್ಟಿದಾಗ ಮಾತ್ರ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಎಂದರು.

ಇದೆ ವೇಳೆ ಕಾರ್ಯಕಾರಿ ಮತ್ತು ಕೌನ್ಸಿಲ್ ಸಮಿತಿ ರಚಿಸಲಾಯಿತು.ಪ್ರಮುಖರಾದ ಕಲ್ಲುಕಂಬ ಮಾರೆಪ್ಪ, ಕೆರೆಕೆರೆ ಬಸವರಾಜ್, ಮಣಿಕಂಠ, ಅನಿಲ್ , ಮಾಬುಸಾಬ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net