ಕೃಷಿ ಹೊಂಡದಲ್ಲಿ ಮೊಸಳೆ ಪ್ರತ್ಯಕ್ಷ

22 KAMPLI 05
ಕಂಪ್ಲಿ ತಾಲೂಕಿನ ಜವುಕು ಗ್ರಾಮದ ಕೃಷಿ ಹೊಂಡದಲ್ಲಿ ಸಿಕ್ಕ ಮೊಸಳೆಯನ್ನು ರಕ್ಷಿಸಿರುವುದು. ಅರಣ್ಯ ಇಲಾಖೆ ಸಿಬ್ಬಂದಿ ವೀರೇಶ್ ಮಾಶೆಟ್ಟಿ, ರವಿಚಂದ್ರ, ವೇಷಗಾರ ಮಲ್ಲಯ್ಯ ಇತರರಿದ್ದರು.
Published on

ಕಂಪ್ಲಿ: ತಾಲೂಕಿನ ಜವುಕು ಗ್ರಾಮದ ರೈತ ವಿಶ್ವೇಶ್ವರರಾವು ಅವರ ಕೃಷಿ ಹೊಂಡದಲ್ಲಿ ಮೊಸಳೆ ಕಂಡುಬಂದಿದ್ದು, ಮಂಗಳವಾರ ರಕ್ಷಿಸಿ ತುಂಗಭದ್ರಾ ಜಲಾಶಯದಲ್ಲಿ ಬಿಡಲಾಯಿತು.

ಹೊಸಪೇಟೆ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಕೌಶಿಕ್ ದಳವಾಯಿ ಮಾತನಾಡಿ, ಕೃಷಿ ಹೊಂಡದಲ್ಲಿ ಮೊಸಳೆ ಇರುವುದು ಅಪರೂಪ. ಬಹುಶಃ ಮಳೆ ನೀರಿನೊಂದಿಗೆ ಬಂದು ಹೊಂಡ ಸೇರಿರುವ ಸಾಧ್ಯತೆಯಿದೆ. ಕಳೆದ ಮೂರ‌್ನಾಲ್ಕು ದಿನಗಳ ಹಿಂದೆಯೇ ಜವುಕಿನ ಕೃಷಿ ಹೊಂಡದಲ್ಲಿ ಮೊಸಳೆ ಇರುವುದು ಗಮನಕ್ಕೆ ಬಂದಿತ್ತು. ಮೊಸಳೆಯನ್ನು ಸಿರಗುಪ್ಪದ ವೇಷಗಾರ ಮಲ್ಲಯ್ಯ ರಕ್ಷಿಸಿದ್ದಾರೆ.

ಮೊಸಳೆ ಮೂರಡಿ ಉದ್ದವಿದ್ದು 50 ಕೆಜಿ ತೂಕದ್ದಾಗಿದೆ ಎಂದರು. ಉಪ ವಲಯ ಅರಣ್ಯಾಧಿಕಾರಿ ವೀರೇಶ್ ಮಾಶೆಟ್ಟಿ, ಗಸ್ತು ಅರಣ್ಯಪಾಲಕ ರವಿಚಂದ್ರ, ವೇಷಗಾರ ಮಲ್ಲಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net