ರೈತನ ಜಮೀನಿಗೆ ಕೃಷಿ ಸಚಿವ ಪಾಟೀಲ ಭೇಟಿ

15-RNR_06A
Published on

ರಾಣೆಬೆನ್ನೂರ: ಕಬ್ಬಿಗೆ ಬೆಂಕಿಯಿಟ್ಟು ಆತ್ಮಹತ್ಯೆಗೆ ಯತ್ನಿಸಿದ ತಾಲೂಕಿನ ಮುದೇನೂರ ಗ್ರಾಮದ ರೈತ ಹೊನ್ನಪ್ಪ ಪುಟ್ಟಕ್ಕನವರ ಅವರ ಜಮೀನಿಗೆ ಭಾನುವಾರ ಕೃಷಿ ಸಚಿವ ಬಿ.ಸಿ. ಪಾಟೀಲ ಭೇಟಿ ನೀಡಿ ಪರಿಶೀಲಿಸಿ, ರೈತನಿಗೆ ಸಾಂತ್ವನ ಹೇಳಿದರು.

‘ರೈತರು ಯಾವುದೇ ಕಾರಣಕ್ಕೂ ಎದೆಗುಂದಬಾರದು. ರೈತ ಹೊನ್ನಪ್ಪನಿಗೆ ಆಗಿರುವ ತೊಂದರೆ ಕುರಿತು ಜಿಲ್ಲಾಧಿಕಾರಿಯೊಂದಿಗೆ ಮತ್ತು ಕಾರ್ಖಾನೆಯವರೊಂದಿಗೆ ರ್ಚಚಿಸಿ ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದರು.

ರೈತ ಮುಖಂಡ ರವೀಂದ್ರಗೌಡ ಪಾಟೀಲ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎನ್. ಮಂಜುನಾಥ, ಸಹಾಯಕ ನಿರ್ದೇಶಕ ಎಚ್.ಬಿ. ಗೌಡಪ್ಪಳವರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಗ್ರಾ.ಪಂ. ಕಾರ್ಯದರ್ಶಿ ಗಣೇಶ ಬಾನಿ, ರೈತರಾದ ದಿಳ್ಳೆಪ್ಪ ಸತ್ಯಪ್ಪನವರ, ವಿರೂಪಾಕ್ಷಪ್ಪ ಮೇಡ್ಲೇರಿ, ಹರಿಹರಗೌಡ ಪಾಟೀಲ, ಜಮಾಲಸಾಬ ಶೇತಸನದಿ, ಹನುಮಂತಪ್ಪ ಕೊಳ್ಳೇರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net