28ರಂದು ಬಳ್ಳಾರಿಗೆ ಕೃಷಿ ಸಚಿವ ಭೇಟಿ

BLY- 24-5
ಎನ್.ಚಲುವರಾಯಸ್ವಾಮಿ
Published on

ಬಳ್ಳಾರಿ : ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ನ.28 ಮತ್ತು 29ರಂದು ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವರು.

ನ.28ರಂದು ಮಧ್ಯಾಹ್ನ 3.05 ಕ್ಕೆ ಬೆಂಗಳೂರಿನಿಂದ ವಾಯುಮಾರ್ಗದ ಮೂಲಕ 4.10ಕ್ಕೆ ತೋರಣಗಲ್‌ಗೆ ಆಗಮಿಸುವರು. ಅಲ್ಲಿಂದ 4.15ಕ್ಕೆ ಹೊರಟು, 4.40ಕ್ಕೆ ಸಂಡೂರು ತಾಲೂಕಿನ ಕೋಡಾಲು ಮತ್ತು ರಾಜಾಪುರ ಗ್ರಾಮ ವ್ಯಾಪ್ತಿಯ ಹತ್ತಿ, ನವಣೆ ಮತ್ತು ಸಜ್ಜೆ ಬೆಳೆ ಹಾನಿ ಹಾಗೂ ಬರ ಪರಿಸ್ಥಿತಿ ವೀಕ್ಷಣೆ ನಡೆಸುವರು.

ಸಂಜೆ 6ಕ್ಕೆ ತೋರಣಗಲ್ಲಿನ ಜಿಂದಾಲ್ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡುವರು. ನ.29ರಂದು ಬೆಳಗ್ಗೆ 9 ಗಂಟೆಗೆ ಹೊರಟು, 9.30ಕ್ಕೆ ಬಳ್ಳಾರಿ ತಾಲೂಕು ವ್ಯಾಪ್ತಿಯ ಬೆಳಗಲ್ ಮತ್ತು ಹಲಕುಂದಿ ಗ್ರಾಮ ವ್ಯಾಪ್ತಿಯ ತೊಗರಿ ಮತ್ತು ಸಜ್ಜೆ ಬೆಳೆ ಹಾನಿ ಹಾಗೂ ಬರ ಪರಿಸ್ಥಿತಿ ವೀಕ್ಷಣೆ ಮಾಡುವರು. ನಂತರ ಬೆಳಗ್ಗೆ 10.30 ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಳ್ಳಾರಿ ಜಿಲ್ಲೆಯ ಕೃಷಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸುವರು.

ಬಳಿಕ 11.30ಕ್ಕೆ ಪತ್ರಿಕಾಗೋಷ್ಠಿ ನಡೆಸುವರು. ಮಧ್ಯಾಹ್ನ 12 ಗಂಟೆಗೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ಹಾಗೂ ಕಾರ್ಯಕರ್ತರ ಅಹವಾಲು ಆಲಿಸುವರು. ನಂತರ ಮಧ್ಯಾಹ್ನ 12.30 ಕ್ಕೆ ಬಳ್ಳಾರಿಯಿಂದ ನಿರ್ಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net