

ಚಿತ್ರದುರ್ಗ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಆ.29ರಂದು ಜಿಲ್ಲಾ ಪ್ರವಾಸ ನಡೆಸಲಿದ್ದಾರೆ.
ಅಂದು ಬೆಳಗ್ಗೆ 10ಕ್ಕೆ ನಗರದ ಪ್ರವಾಸಿ ಮಂದಿರದಲ್ಲಿ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸುವರು. 10.45ಕ್ಕೆ ಪಕ್ಷದ ಕಚೇರಿಗೆ ಭೇಟಿ, 11.15ಕ್ಕೆ ದೊಡ್ಡಸಿದ್ದವನಹಳ್ಳಿ ಸಾವಯವ ಹಾಗೂ ಸಮಗ್ರ ಕೃಷಿ ತೋಟ, ಬೆಳಗ್ಗೆ 11.30ಕ್ಕೆ ಲಕ್ಷ್ಮೀಸಾಗರದಲ್ಲಿ ಮೆಕ್ಕೆಜೋಳ ಬೆಳೆಹಾನಿ ವೀಕ್ಷಣೆ.
ಮಧ್ಯಾಹ್ನ 12 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ತುಂತುರು ನೀರಾವರಿ ಯಂತ್ರಗಳ ವಿತರಣೆ. ಮಧ್ಯಾಹ್ನ 12.15ರಿಂದ 1.15ರವರೆಗೆ ಜಿಪಂದಲ್ಲಿ ಕೃಷಿ ತಜ್ಞರು, ಪ್ರಗತಿಪರ ಕೃಷಿಕರು, ಕೃಷಿ ಸಾಧಕರು ಹಾಗೂ ರೈತರೊಂದಿಗೆ ಸಂವಾದ. ಸುದ್ದಿಗೋಷ್ಠಿ ಬಳಿಕ 2.15ಕ್ಕೆ ಚಿತ್ರದುರ್ಗದಿಂದ ಚಳ್ಳಕೆರೆ ತಾಲೂಕು ಕಾಲುವೆಹಳ್ಳಿಗೆ ತೆರಳಿ ಲೇಜರ್ ತಂತ್ರಜ್ಞಾನದೊಂದಿಗೆ ಡ್ರಿಫ್ ಅಳವಡಿಸಿದ ಮೆಕ್ಕೆಜೋಳ ತಾಕು ವೀಕ್ಷಿಸುವರು.
ಮಧ್ಯಾಹ್ನ 3.15ಕ್ಕೆ ಜುಂಜರಗುಂಟೆ ಶೇಂಗಾ ಬೆಳೆ ಪ್ರದೇಶಗಳಿಗೆ ಭೇಟಿ ನೀಡುವರು. 3.30ಕ್ಕೆ ಚೌಳೂರು ಸಮೀಪದ ಬ್ರಿಡ್ಜ್ ಕಂ. ಬ್ಯಾರೇಜ್ ನಿರ್ಮಾಣ ಬಳಿಕ ಬೆಳೆ ಪರಿವರ್ತನೆಯಾದ ತಾಕುಗಳಿಗೆ ಭೇಟಿ ನೀಡುವರು. ಸಂಜೆ 4 ಗಂಟೆಗೆ ಮೈಸೂರಿಗೆ ಪ್ರಯಾಣ ಬೆಳೆಸುವರು.