

ಚನ್ನಮ್ಮನ ಕಿತ್ತೂರು: ನಮ್ಮ ಸರ್ಕಾರ ಬಂದ ಮೇಲೆ ರೈತರಿಗೆ ಸಾಕಷ್ಟು ಸೌಲಭ್ಯ ನೀಡುತ್ತಿದ್ದೇವೆ. ಇತಿಹಾಸದಲ್ಲೇ ಯಾವ ಸರ್ಕಾರವು ನಮ್ಮಷ್ಟು ಸೌಲಭ್ಯಗಳನ್ನು ರೈತರಿಗೆ ಕೊಟ್ಟಿಲ್ಲ ಎಂದು ಕಷಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದರು.
ಸ್ಥಳೀಯ ಎಪಿಎಂಸಿ ಆವರಣದಲ್ಲಿ ನಿರ್ಮಿಸಲಾದ ಸಮಗ್ರ ಕಷಿ ಪದ್ಧತಿ ಶ್ರೇಷ್ಠತಾ ಕೇಂದ್ರದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರವು ಕಷಿ ಹೊಂಡ ಯೋಜನೆ ಸ್ಥಗಿತಗೊಳಿಸಿತ್ತು. ಅದನ್ನು ನಮ್ಮ ಸರ್ಕಾರ ಪ್ರಾರಂಭ ಮಾಡಿತು. ರೈತರಿಗೆ ಕಬ್ಬು ಕಟಾವು ಯಂತ್ರವನ್ನು ಶೇ.50 ಸಬ್ಸಿಡಿ ಆಧಾರದ ಮೇಲೆ ನೀಡುತ್ತಿದ್ದೇವೆ. ಹಾಲಿನ ದರ ಹೆಚ್ಚಿಗೆ ಮಾಡಿ ಅದನ್ನು ರೈತರಿಗೆ ಪ್ರೋತ್ಸಾಹಧನವನ್ನಾಗಿ ನೀಡುತ್ತಿದ್ದೇವೆ ಎಂದು ಹೇಳಿದರು.
ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಕಿತ್ತೂರು ತಾಲೂಕಾಗಿ 12 ವರ್ಷವಾದರೂ ಕಷಿ ಸಹಾಯಕ ನಿರ್ದೇಶಕರ ಹುದ್ದೆ ಇಲ್ಲ. ಅದನ್ನು ಮಂಜೂರು ಮಾಡಬೇಕು ಮತ್ತು ನಮ್ಮ ಕ್ಷೇತ್ರದಲ್ಲಿ ಜವಳು ಭೂಮಿ ಇದೆ. ಯಾವುದೇ ಸಲು ಬರುವುದಿಲ್ಲ. ಅದಕ್ಕಾಗಿ ಯೋಜನೆ ಜಾರಿಗೊಳಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿಕೊಂಡರು.
ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ, ಬೆಂಗಳೂರಿನ ಕಷಿ ನಿರ್ದೇಶಕ ಜಿ.ಟಿ.ಪುತ್ರ, ಸೆಕೆಂಡರಿ ಕಷಿ ನಿರ್ದೇಶಕ ವೆಂಕಟರಮನರೆಡ್ಡಿ ಪಾಟೀಲ, ಬೆಳಗಾವಿಯ ಜಂಟಿ ಕಷಿ ನಿರ್ದೇಶಕ ಶಿವನಗೌಡ ಪಾಟೀಲ, ಕಷಿ ಉಪನಿರ್ದೇಶಕ ಎಸ್.ಬಿ.ಕೊಂಗವಾಡ, ತಹಸೀಲ್ದಾರ್ ರವೀಂದ್ರ ಹಾದಿಮನಿ, ಸಹಾಯಕ ಕಷಿ ನಿರ್ದೇಶಕ ಬಸವರಾಜ ದಳವಾಯಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವೈ.ತುಬಾಕದ, ಕಷಿ ಅಧಿಕಾರಿ ಮಂಜುನಾಥ ಕೆಂಚರಾಹುತ, ಎಸ್.ಈ.ನಿಂಬಲಗುಂದಿ, ಪಡೆಪ್ಪ ಬೋಗೂರ ಇತರರಿದ್ದರು.