

ವಿಜಯಪುರ: ಕೃಷಿ ಕ್ಷೇತ್ರದಲ್ಲಿ ಸಹಕಾರ ಮನೋಭಾವ ಬೆಳವಣಿಗೆ ವೃದ್ಧಿಯಾಗಬೇಕು. ಅದರಿಂದ ಕೂಲಿ ಕಾರ್ಮಿಕರಿಗೆ ಅನುಕೂಲವಾಗುತ್ತದೆ. ಇಂದು ಸಾಹಿತ್ಯ ಪರಿಷತ್ ಕೃಷಿ ಸಂಬಂಧಿತ ವಿಷಯಗಳ ಕುರಿತ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅತ್ಯಂತ ಸಂತಸದ ಸಂಗತಿ ಎಂದು ಸಹಕಾರಿ ಧುರೀಣ ಎಂ.ಆರ್. ಪಾಟೀಲ ಹೇಳಿದರು.
ನಗರದ ಕಸಾಪ ಸಭಾಭವನದಲ್ಲಿ ಭಾನುವಾರ ಜಿಲ್ಲೆ, ತಾಲೂಕು ಮತ್ತು ಕಸಾಪ ನಗರ ಟಕಗಳ ಸಂಯುಕ್ತಾಶ್ರಯದಲ್ಲಿ ದಿ. ಮಡಿವಾಳಪ್ಪ ತುಳಜಪ್ಪ ಸಾಸನೂರ ದತ್ತಿ, ದತ್ತಿ ದಾನಿ ಡಾ. ಅಶೋಕ ಸಾಸನೂರ ವಿಷಯದ ಜಾನಪದ ಸಾಹಿತ್ಯ ಕುರಿತ ಚಿಂತನೆ ಮತ್ತು ದಿ. ರಾಯನಗೌಡ ಮ. ಪಾಟೀಲ ದತ್ತಿ, ದತ್ತಿ ದಾನಿ ಡಾ. ರಾಯನಗೌಡ ಪಾಟೀಲ ವಿಷಯ ಗ್ರಾಮೀಣ ಅಭಿವೃದ್ಧಿಗಾಗಿ ಸಹಕಾರಿ ಸಂಗಳ ಕೊಡುಗೆ ಎಂಬ ದತ್ತಿ ನಿಧಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಸಾಹಿತ್ಯ ಹುಟ್ಟಿ ಬೆಳೆದದ್ದು ಕೃಷಿ ವಲಯದಲ್ಲಿ, ಕೃಷಿ ಸಾಹಿತ್ಯ ೇತ್ರದ ತೊಟ್ಟಿಲು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪಾಲಿಕೆ ಮಾಜಿ ಸದಸ್ಯ ಉಮೇಶ ವಂದಾಲ ಮಾತನಾಡಿ, ನಮ್ಮ ಜಿಲ್ಲೆ ಮಹಾನ್ ಶರಣರ ನಾಡು, ಜಾನಪದ ಸಾಹಿತ್ಯದ ಬೀಡು. ಇಂದು ಪರಿಷತ್ ಮಾಡುತ್ತಿರುವ ಕ್ರಿಯಾಶೀಲ ಕಾರ್ಯಗಳಿಗೆ ನನ್ನ ಸಂಪೂರ್ಣ ಸಹಕಾರವಿದೆ ಎಂದರು.
ಜಾನಪದ ವಿದ್ವಾಂಸ ಬಸವಲಿಂಗಪ್ಪ ಸಾರವಾಡ ಜಾನಪದ ಸಾಹಿತ್ಯ ಕುರಿತ ಉಪನ್ಯಾಸ ನೀಡಿ, ಜಾನಪದ ಸಾಹಿತ್ಯ ಎಲ್ಲ ಸಾಹಿತಿಗಳ ತಾಯಿ ಬೇರು. ಜನಪದರು ನಿಸ್ವಾರ್ಥಿಗಳು ಅಲ್ಲದೆ, ಕಾಯಕಕ್ಕೆ ಹೆಚ್ಚು ಮಹತ್ವ ನೀಡಿದರು. ಆಧುನಿಕ ಭರಾಟೆಯಲ್ಲಿ ಜನಪದ ಸಂಸತಿ ನಶಿಸುತ್ತಿರುವುದು ಕಳವಳಕಾರಿ ವಿಷಯವಾಗಿದೆ ಎಂದು ಬೇಸರ ವ್ಯಕ್ತಪಡಿಸದರು.
ರೈತ ಸಂದ ಮುಖಂಡ ಸಂಗಮೇಶ ಸಗರ ಗ್ರಾಮೀಣ ಅಭಿವೃದ್ಧಿಗೆ ಸಹಕಾರ ಸಂಗಳ ಕೊಡುಗೆ ಕುರಿತು ಉಪನ್ಯಾಸ ನೀಡಿದರು. ದತ್ತಿ ದಾನಿಗಳಾದ ದೀಲಿಪರಾಜ ರಾಯನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಡಾ. ಅಶೋಕಕುಮಾರ ಜಾಧವ, ಬಸವರಾಜ ಇಜೇರಿ ವಂದಾಲ, ಈರಪ್ಪ ಶಿರೂರ, ಇಜೇರಿ ಅಕಾಡೆಮಿ ಅಧ್ಯಕ್ಷ ಬಸವರಾಜ ಇಜೇರಿ ಅವರನ್ನು ಸನ್ಮಾನಿಸಲಾಯಿತು.
ಡಾ. ಮಾಧವ ಗುಡಿ ನಿರೂಪಿಸಿದರು. ಡಾ. ಆನಂದ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸಂಗಮೇಶ ಮೇತ್ರಿ ವಂದಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ನಗರ ಟಕದ ಅಧ್ಯಕ್ಷೆ ಅನ್ನಪೂರ್ಣ ಬೆಳ್ಳಣ್ಣವರ, ರಾಜೇಸಾಬ ಶಿವನಗುತ್ತಿ, ವಿದ್ಯಾವತಿ ಅಂಕಲಗಿ, ಕಮಲಾ ಮುರಾಳ, ಸುಖದೇವಿ ಅಲಬಾಳಮಠ , ಶಿಲ್ಪಾ ಭಸ್ಮೆ , ಬಿ.ಎಂ. ಅಜೂರ್, ಸಿದ್ರಾಮಯ್ಯ ಲಕ್ಕುಂಡಿಮಠ, ಮಹಾದೇವಿ ತೆಲಗಿ, ಕೆ. ಸುನಂದ, ಗಂಗಮ್ಮ ರೆಡ್ಡಿ, ಮಮತಾ ಮುಳಸಾವಳಗಿ, ಶಾಂತಾ ವಿಭೂತಿ, ತೇಜಸ್ವಿನಿ ವಾಂಗಿ, ಎನ್.ಕೆ. ಕುಂಬಾರ, ವಿಠಲ ರಾಠೋಡ, ಆರ್.ಸಿ. ವಾಡೆದ್, ಬಿ.ಎಸ್. ಬಳ್ಳೂರ, ಅಹಮದ್ ವಾಲಿಕಾರ ಮತ್ತಿತರರಿದ್ದರು.