ಹೆಣ್ಣುಭ್ರೂಣಹತ್ಯೆಯನ್ನು ನಿರ್ಮೂಲನೆ ಮಾಡಿ

CHN
Published on

ಚನ್ನಗಿರಿ: ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಆಗಲು ಕಾರಣ ತಿಳಿದ ನಾವೆಲ್ಲರೂ ಹೆಣ್ಣು ಭ್ರೂಣಹತ್ಯೆ ತಡೆಗೆ ಗಂಭೀರ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ಸಂಶೋಧನೆ ಕೇಂದ್ರದ ವಿಸ್ತಾರಣಾ ವಿಜ್ಞಾನಿ ಡಾ. ಗಂಗಪ್ಪ ಗೌಡ ಬಿರಾದಾರ ತಿಳಿಸಿದರು.

ತಾಲೂಕಿನ ಕತ್ತಲಗೆರೆ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ಸಂಶೋಧನಾ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಜಗತ್ತಿನ ಎಲ್ಲ ದೇಶಗಳು ಅಭಿವೃದ್ಧಿ ಪಥದಲ್ಲಿ ಮುಂಚೂಣಿಯಲ್ಲಿರಬೇಕು ಎಂದು ಬಯಸುತ್ತಿರುವ ಈ ಸಂದರ್ಭದಲ್ಲಿ ಮಹಿಳೆಯರು ಪುರುಷರ ಸರಿ ಸಮಾನವಾಗಿ ತಂತ್ರಜ್ಞಾನ, ಆರ್ಥಿಕತೆ, ರಾಜಕೀಯ, ರಕ್ಷಣಾ ಕ್ಷೇತ್ರದಲ್ಲಿ ಕರ್ತವ್ಯವನ್ನು ನಿಭಾಯಿಸುವ ಶಕ್ತಿ ಹೊಂದಿದ್ದರೆ ಎಂದು ಶ್ಲಾಘಿಸಿದರು.

ಎಲ್ಲ ಕ್ಷೇತ್ರಗಳಲ್ಲಿ ಗುರುತಿಸಬಹುದಾದ ಸಾಧನೆ ಮಾಡುತ್ತಿರುವ ಸ್ತ್ರೀಯರ ಮೇಲೆ ಅನೇಕ ರೀತಿ ದೌರ್ಜನ್ಯಗಳು ನಡೆಯುತ್ತಿರುವುದು ದುರಂತವೇ ಸರಿ. ಪುರುಷರ ಮನಸ್ಥಿತಿ ಸರಿ ಹೋದರೆ ಇಂಥಹವುಗಳುಇಗೆ ತನ್ನಿಂತಾನೆ ಕಡಿವಾಣ ಬೀಳಲಿದೆ ಎಂದರು.

ವಿಜ್ಞಾನಿ ಡಾ. ಸಂತೋಷ್‌ಕುಮಾರ್ ಮಾತನಾಡಿ, ಹೆಣ್ಣು ಅಬಲೆಯಲ್ಲ ಸಬಲೆ ಎನ್ನುವುದನ್ನು ಈಗಾಗಲೇ ನಿರೂಪಿಸಿದ್ದಾಳೆ. ಪುರಾಣ ಕಾಲದಿಂದ ಈ ಕಾಲದ ವರೆಗೆ ಇದಕ್ಕೆ ನೂರಾರು ನಿದರ್ಶನಗಳಿವೆ.ಅವರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ನಿರಂಜನ್ ಕುಮಾರ್, ಸರ್ವಜ್ಞ ಬಿ. ಸಾಲಿಮಠ, ಬಿ. ಮಂಜುನಾಥ್, ಲೋಹಿತ್ ಕುಮಾರ್, ಕೆ. ವಸಂತಮ್ಮ, ಉಮಾ ಸೋಮಶೇಖರಪ್ಪ, ಪ್ರೇಮಾ ಗಾಣದಕಟ್ಟೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net