ರೈತರಿಗೆ ಸಕಾಲದಲ್ಲಿ ಗೊಬ್ಬರ ಒದಗಿಸಿ

dj hlk krushi
Published on

ಹೊಳಲ್ಕೆರೆ: ರೈತರಿಗೆ ಸಕಾಲದಲ್ಲಿ ಗುಣಮಟ್ಟದ ರಾಸಾಯನಿಕ ಗೊಬ್ಬರ, ಬಿತ್ತನೆ ಬೀಜ ಹಾಗೂ ಕೀಟನಾಶಕಗಳು ಕೈಗೆಟಕುವ ದರದಲ್ಲಿ ದೊರೆಯಲಿ ಎನ್ನುವ ಸದುದ್ದೇಶದಿಂದ ಮಳಿಗೆ ಆರಂಭಿಸಿರುವುದು ಶ್ಲಾಘನೀಯ ಎಂದು ಸಹಾಯಕ ಕೃಷಿ ನಿರ್ದೇಶಕ ಕೆ.ಟಿ.ಮಂಜುನಾಥ್ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಕೃಷಿ ಪರಿಕರ ಮಾರಾಟ ಸಂಘವನ್ನು ಉದ್ಘಾಟಿಸಿ ಮಾತನಾಡಿ, ಸಂಘ ರೈತರ ಶ್ರೇಯೋಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ವ್ಯಾಪಾರಮಾಡಬೇಕು ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಮಾ.ಕಂ.ವೆಂಕಟೇಶ್‌ಮೂರ್ತಿ ಮಾತನಾಡಿ, ವ್ಯಾಪಾರಸ್ಥರು ಮತ್ತು ರೈತರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ.

ರೈತರಿಂದ ಹೆಚ್ಚಿನ ಆಹಾರ ಧಾನ್ಯಗಳ ಸೃಷ್ಟಿಯ ಜತೆಗೆ ದೇಶದ ಆರ್ಥಿಕ ಸಬಲತೆಗೆ ವ್ಯಾಪಾರಸ್ಥರು ಕಾರಣರಾಗಿದ್ದಾರೆ ಎಂದರು.

ಕೃಷಿ ಇಲಾಖೆ ಗೋಪಿಕೃಷ್ಣ, ಪಾಡಿಗಟ್ಟಿ ಸುರೇಶ್, ವೀರಭದ್ರಪ್ಪ, ಮಲ್ಲಾಡಿಹಳ್ಳಿ ಯುವರಾಜ ಗೌಡ, ರಾಮಗಿರಿ ಚೇತನ್ ಕುಮಾರ್, ಬಿ.ದುರ್ಗ ವಿಜಯಕುಮಾರ್, ತಾಳ್ಯ ಕರಿಬಸಣ್ಣ, ಗಂಗಾಧರಪ್ಪ, ಹೊಳಲ್ಕೆರೆ ಗುರುರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net