ದೆಹಲಿ ರೈತ ಚಳವಳಿಯಲ್ಲಿ ಸ್ವಹಿತಾಸಕ್ತಿ

web 3
Published on

ಶೃಂಗೇರಿ: ದೆಹಲಿಯಲ್ಲಿ ನಡೆಯುತ್ತಿರುವ ರೈತ ಚಳವಳಿ ಕೆಲವೇ ಸ್ವಹಿತಾಸಕ್ತಿ ಗುಂಪಿನದ್ದಾಗಿದೆ. ಕೃಷಿ ಮಸೂದೆ ರೈತರ ಹಲವು ವರ್ಷದ ಬೇಡಿಕೆ ಎಂದು ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದ ನಂತರ ಮೊದಲ ಬಾರಿಗೆ ಕುಟುಂಬ ಸಮೇತ ಶಾರದಾಂಬೆ ಪೂಜೆ ಸಲ್ಲಿಸಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

18 ರೈತ ಸಂಘಟನೆಗಳು ಮಸೂದೆಯನ್ನು ಒಪ್ಪಿವೆ. ಬೆಳೆ ಜತೆಗೆ ಒಪ್ಪಂದವೇ ಹೊರತು, ಯಾವುದೇ ಕಂಪನಿಗಳೊಂದಿಗೆ ಅಲ್ಲ. ಬೆಂಬಲ ಬೆಲೆ ಯೋಜನೆ, ಎಪಿಎಂಸಿ ರದ್ದು ಮಾಡಿಲ್ಲ. ಇದು ರೈತ ಪರ ಮಸೂದೆ ಎಂದು ಹೇಳಿದರು.

ಶಾರದಾಂಬೆ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಇದಕ್ಕೂ ಮೊದಲು ನರಸಿಂಹವನದ ಗುರುನಿವಾಸದಲ್ಲಿ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳ ಆಶೀರ್ವಾದ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net