ಕೃಷಿ ಮೇಳಕ್ಕೆ ಸಂಪೂರ್ಣ ಸಹಕಾರ

8..1
ಬೈಲಹೊಂಗದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿದರು. ಶಿವನಗೌಡ ಪಾಟೀಲ, ಶಿವರಂಜನ ಬೋಳಣ್ಣವರ, ಸಚ್ಚಿದಾನಂದ ಕುಚನೂರ ಇತರರು ಇದ್ದರು.
Published on

ಬೈಲಹೊಂಗಲ: ಡಿ.4ರಂದು ಜರುಗುವ ಪಟ್ಟಣದ ಐತಿಹಾಸಿಕ ಮರಡಿ ಬಸವೇಶ್ವರ ಜಾತ್ರಾ ನಿಮಿತ್ತ ಕೃಷಿ ಮೇಳ ಹಾಗೂ ಜಾನುವಾರು ಜಾತ್ರೆಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ಪಟ್ಟಣದ ಎಪಿಎಂಸಿ ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜಾನುವಾರು ಜಾತ್ರೆ ಮೂಲಕ ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗೆ ಆತ್ಮಸ್ಥೈರ್ಯ ತುಂಬಲು, ಯುವ ಜನತೆಯಲ್ಲಿ ಜಾನುವಾರು ಬಗ್ಗೆ ಆಸಕ್ತಿ ಮೂಡಿಸಲು, ಕಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು, ಕೃಷಿ ಆದಾಯ ಹೆಚ್ಚಿಸಲು ಉಪಕಸುಬು ಕೈಗೊಳ್ಳುವ ಕ್ರಮಗಳ ಬಗ್ಗೆ ನುರಿತ ತಜ್ಞರಿಂದ ಪ್ರಾತ್ಯಕ್ಷಿಕೆಗಳ ಪ್ರದರ್ಶನ ನಡೆಯಲಿದೆ ಎಂದರು.

ಶಿವರಂಜನ ಬೋಳಣ್ಣವರ ಮಾತನಾಡಿ, ಕಡಿಮೆ ನೀರಿನಲ್ಲಿ ಕಷಿ ಹಾಗೂ ಜೇನು, ಮೊಲ, ಆಡು, ಕುರಿ ಕೋಳಿ ಸಾಕಣೆ ಮತ್ತು ಸರ್ಕಾರದಿಂದ ಕೃಷಿಕರಿಗೆ ಸಿಗುವ ಎಲ್ಲ ಸಹಾಯಗಳ ಮಾಹಿತಿ ನೀಡಲು ಡಿ.6ರಿಂದ 8ರ ವರೆಗೆ ಜಾನುವಾರು, ಶ್ವಾನ ಪ್ರದರ್ಶನ ಹಾಗೂ ಕೃಷಿ ಮೇಳ ಆಯೊಜಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

ಜಿಲ್ಲಾ ಕಷಿ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಕನ್ನಡ ಹೋರಾಟಗಾರ ಮಹಾಂತೇಶ ತುರಮರಿ ಮಾತನಾಡಿ, ಕಷಿ ಬಗ್ಗೆ ಜ್ಞಾನ, ಮನರಂಜನೆ ಹಾಗೂ ಹೊಸ ಉದ್ಯೋಗಕ್ಕೆ ಯುವಕರನ್ನು ಸನ್ನದ್ಧಗೊಳಿಸಲು ಮೇಳ ಆಯೋಜಿಸಲಾಗಿದೆ ಎಂದರು.

ತಹಸೀಲ್ದಾರ್ ಸಚ್ಚಿದಾನಂದ ಕುಚನೂರ, ಎಪಿಎಂಸಿ ಜಿಲ್ಲಾ ಉಪನಿರ್ದೇಶಕ ಬಸಪ್ಪ ಜಾಲಿಬೇರಿ, ಕಷಿ ಸಹಾಯಕ ನಿರ್ದೇಶಕ ಬಸವರಾಜ ದಳವಾಯಿ, ಎಪಿಎಂಸಿ ಕಾರ್ಯದರ್ಶಿ ಎಸ್.ಎಸ್. ಅರಳಿಕಟ್ಟಿ, ಪುರಸಭೆ ಮಾಜಿ ಅಧ್ಯಕ್ಷ ರಾಜು ಜನ್ಮಟ್ಟಿ, ಸೋಮೇಶ್ವರ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಮಹಾಂತೇಶ ಮತ್ತಿಕೊಪ್ಪ, ಸಿ.ಕೆ.ಮೆಕ್ಕೇದ, ಎ್.ಎಸ್.ಸಿದ್ದನಗೌಡರ, ಗುರು ಮೆಟಗುಡ್ಡ, ಮಡಿವಾಳಪ್ಪ ಹೋಟಿ, ಶ್ರೀಶೈಲ ಯಡಳ್ಳಿ, ಬಾಬು ಸಂಗೊಳ್ಳಿ, ಮಹಾಂತೇಶ ಮತ್ತಿಕೊಪ್ಪ, ಬಸವರಾಜ ಭರಮಣ್ಣವರ, ಮಹೇಶ ಬೆಲ್ಲದ, ಈರಣ್ಣ ಬೆಟಗೇರಿ, ಸುರೇಶ ವಾಲಿ, ಮಾರುತಿ ತಿಗಡಿ, ಶೇಖರ ಜತ್ತಿ, ತೊಟಗಾರಿಕೆ, ಕಷಿ ವಿವಿ ಹಾಗೂ ಪಶು ಇಲಾಖೆ ಅಧಿಕಾರಿಗಳು, ರೈತ ಮುಖಂಡರು ಸಲಹೆ ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net