ಕೃಷಿಗೆ ಪರಿಸರ ಸ್ನೇಹಿ ಸಾಧನಗಳು ಬಳಸಿ

6mnv01
ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದಲ್ಲಿ ಬಿಟಿ ಹತ್ತಿಯಲ್ಲಿ ಗುಲಾಬಿ ಕಾಯಿಕೊರಕ ನಿರ್ವಹಣೆ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಕುಲಪತಿ ಡಾ.ಎಂ.ಹನುಮಂತಪ್ಪ ಉದ್ಘಾಟಿಸಿದರು. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕೀಟಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎ.ಜಿ. ಶ್ರೀನಿವಾಸ, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಡಾ. ಜಯಪ್ರಕಾಶ್, ಟಿಸಿ ಡಾ.ಶಿವಶಂಕರ್‌ಎನ್, ಕೃಷಿ ವಿಸ್ತರಣಾ ನಿರ್ದೇಶ ಡಾ.ಕೆ.ನಾರಾಯಣರಾವ್, ಸಹ ಸಂಶೋಧನಾ ನಿರ್ದೇಶಕ ಡಾ.ಅಮರೇಗೌಡ ಪ್ರಮುಖರಾದ ಡಾ.ಬಿ.ಹಾಲಪ್ಪಾ, ಪ್ರಭು, ಅಭಿಜಿತ್, ಭರತ್, ರವಿಕುಮಾರ್ ಬೋಲಿ, ಡಾ.ಎಸ್.ಹನುಮಂತಪ್ಪ, ಡಾ.ಜೆ.ಎಂ. ನಿಡಗುಂದಿ, ಡಾ.ಎಸ್.ಜಿ.ಹಂಚಿನಾಳ, ಡಾ.ಅಜಯ್‌ಕುಮಾರ್ ಇನ್ನಿತರರಿದ್ದರು.
Published on

ಮಾನ್ವಿ: ಬಿ.ಟಿ. ಹತ್ತಿಯಲ್ಲಿ ಕಳೆದ 10 ವರ್ಷಗಳಿಂದ ಗುಲಾಬಿ ಕಾಯಿಕೊರಕ ರೈತರಿಗೆ ಸಾಕಷ್ಟು ಹಾನಿ ಮಾಡುತ್ತಿದೆ ಎಂದು ಜಪಾನಿನ ವಿಜ್ಞಾನಿ ಟಕೇರು ಕೋಯಾಮ ಕಳವಳ ವ್ಯಕ್ತಪಡಿಸಿದರು.

ಇದನ್ನೂ ಓದಿ: http://ರೈತ 

ತಾಲೂಕಿನ ಕುರ್ಡಿ ಗ್ರಾಮದ ಪ್ರಗತಿ ಪರ ರೈತ ವೆಂಕಟೇಶ್ವರರೆಡ್ಡಿ ಜಮೀನಿನಲ್ಲಿ ಗುರುವಾರ ವಿವಿಧ ಕೃಷಿ ವಿಜ್ಞಾನಗಳ ಸಂಸ್ಥೆಗಳಿಂದ ಪಿ.ಬಿ.ರೊಪೆಲ್ ತಂತ್ರಜ್ಞಾನ ಬಳಸಿ ಬಿಟಿ ಹತ್ತಿಯಲ್ಲಿ ಗುಲಾಬಿ ಕಾಯಿಕೊರಕ ನಿರ್ವಹಣೆ ಕುರಿತು ಆಯೋಜಿಸಿದ್ದ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೀಟ ಸಂಯೋಗ ನಿಯಂತ್ರಣ ತಂತ್ರಜ್ಞಾನ ಬಳಸಿ ರೂಪಿಸಿರುವ ಪಿ.ಬಿ.ರೋಪೆಲ್‌ದಾರದಂತ ಸಾಧನವನ್ನು ರೈತರು ಹತ್ತಿ ಜಮೀನಿನಲ್ಲಿ 5 ಮೀಟರ್ ಅಂತರದಲ್ಲಿ ಹತ್ತಿ ಗಿಡಗಳಿಗೆ ಪ್ರಾರಂಭದ ಹಂತದಲ್ಲಿ ಕಟ್ಟಬೇಕು. ಗಂಡು ಪತಂಗಗಳನ್ನು ಆಕರ್ಷಿಸುವುದರಿಂದ ಗುಲಾಬಿ ಕಾಯಿಕೋರಕ ನಿಯಂತ್ರಣ ಮಾಡಬಹುದಾಗಿದೆ. ಪರಿಸರ ಸ್ನೇಹಿ ಸಾಧನಗಳನ್ನು ಬಳಸಿ ಎಂದರು.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಎಂ.ಹನುಮಂತಪ್ಪ ಮಾತನಾಡಿ, ರೈತರು ಪರಿಸರ ಸ್ನೇಹಿ ಹಾಗೂ ಕಡಿಮೆ ವೆಚ್ಚದ ತಂತ್ರಜ್ಞಾನ ಬಳಸಿಕೊಳ್ಳುವ ಮೂಲಕ ಕೃಷಿಯಲ್ಲಿ ಲಾಭ ಪಡೆಯಬೇಕು. ಪರಿಸರ ಕೂಡ ಉತ್ತಮವಾಗಿರುತ್ತದೆ ಎಂದರು.

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕೀಟಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎ.ಜಿ. ಶ್ರೀನಿವಾಸ, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಡಾ.ಜಯಪ್ರಕಾಶ್, ಟಿ.ಸಿ.ಡಾ.ಶಿವಶಂಕರ್‌ಎನ್, ಕೃಷಿ ವಿಸ್ತರಣಾ ನಿರ್ದೇಶಕ ಡಾ.ಕೆ.ನಾರಾಯಣರಾವ್, ಸಹ ಸಂಶೋಧನಾ ನಿರ್ದೇಶಕ ಡಾ.ಅಮರೇಗೌಡ ಪ್ರಮುಖರಾದ ಡಾ.ಬಿ.ಹಾಲಪ್ಪಾ, ಪ್ರಭು, ಅಭಿಜಿತ್, ಭರತ್, ರವಿಕುಮಾರ್ ಬೋಲಿ, ಡಾ.ಎಸ್.ಹನುಮಂತಪ್ಪ, ಡಾ.ಜೆ.ಎಂ. ನಿಡಗುಂದಿ, ಡಾ.ಎಸ್.ಜಿ.ಹಂಚಿನಾಳ, ಡಾ.ಅಜಯ್‌ಕುಮಾರ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net