ಕೃಷಿ ಉದ್ಯೋಗವಾಗದೆ ಉದ್ಯಮವಾಗಲಿ

10 Ylb 03
ಯಲಬುರ್ಗಾ ಸಮೀಪದ ಕುದರಿಮೋತಿಯಲ್ಲಿ ಹಮ್ಮಿಕೊಂಡಿದ್ದ ಸೌರಶಕ್ತಿ ಚಾಲಿತ ಈರುಳ್ಳಿ ಸಂಗ್ರಹಣೆ, ಒಣಗಿಸುವ ಘಟಕ ಹಾಗೂ ಸಿರಿಧಾನ್ಯಗಳ ಮೌಲ್ಯವರ್ಧನೆಗೊಳಿಸುವ ಘಟಕಗಳ ಉದ್ಘಾಟನೆಯನ್ನು ಶಾಸಕ ಬಸವರಾಜ ರಾಯರಡ್ಡಿ ನೆರವೇರಿಸಿದರು. ಶ್ರೀ ವಿಜಯ ಮಹಾಂತ ಸ್ವಾಮೀಜಿ, ಗ್ರಾಪಂ ಅಧ್ಯಕ್ಷೆ ಫರೀದಾಬೇಗಂ ಪ್ರಮುಖರಾದ ಕೃಷ್ಣ ಉಕ್ಕುಂದ, ಮಹೇಶ ಹಳ್ಳಿ, ಅಶೋಕ ತೋಟದ ಇದ್ದರು.
Published on

ಯಲಬುರ್ಗಾ: ರೈತರು ಕೃಷಿಯಲ್ಲಿ ಹೆಚ್ಚಿನ ಆದಾಯ ಕಂಡುಕೊಳ್ಳಲು ತಾಂತ್ರಿಕತೆ ಅಳವಡಿಸಿಕೊಳ್ಳಬೇಕು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ಸಮೀಪದ ಕುದರಿಮೋತಿಯಲ್ಲಿ ಕೃಷಿ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸೌರಶಕ್ತಿ ಚಾಲಿತ ಈರುಳ್ಳಿ ಸಂಗ್ರಹಣೆ, ಒಣಗಿಸುವ ಘಟಕ ಹಾಗೂ ಸಿರಿಧಾನ್ಯಗಳ ಮೌಲ್ಯವರ್ಧನೆಗೊಳಿಸುವ ಘಟಕ ಉದ್ಘಾಟಿಸಿ ಮಾತನಾಡಿದರು.

ಕೃಷಿ ಉದ್ಯೋಗವಾಗದೆ ಉದ್ಯಮವಾಗಬೇಕು. ಘಟಕಗಳ ಸದುಪಯೋಗ ಪಡಿಸಿಕೊಂಡು ಮುಂದಿನ ದಿನಗಳಲ್ಲಿ ರೈತರು ಆರ್ಥಿಕವಾಗಿ ಸದೃಢರಾಗಬೇಕು. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಕೃಷಿಯಲ್ಲಿ ಯಶಸ್ಸು ಕಾಣಬೇಕು.

ಗ್ರಾಮಕ್ಕೆ 50ಲಕ್ಷ ರೂ. ವೆಚ್ಚದಲ್ಲಿ ಪಶು ಆಸ್ಪತ್ರೆ ಮಂಜೂರಾಗಿದೆ. ರೈತ ಭವನಕ್ಕೆ ಜಮೀನು ನೀಡಿದರೆ ಕಟ್ಟಡ ನಿರ್ಮಾಣವಾಗಲಿದೆ. ಕೆರೆ ತುಂಬಿಸುವ ಯೋಜನೆಗೆ ಆದ್ಯತೆ ನೀಡಲಾಗಿದೆ. ಕೃಷಿಯಲ್ಲಿ ಇನ್ನೂ ಹೆಚ್ಚಿನ ಸಂಶೋಧನೆಗಳು ಆಗಬೇಕಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಫರೀದಾಬೇಗಂ, ಉಪಾಧ್ಯಕ್ಷೆ ಲಕ್ಷ್ಮೀ ವಿಜಯ ದಾಸರ, ರಾಯಚೂರು ಕೃಷಿ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯ ತಿಮ್ಮಣ್ಣ ಚವಡಿ, ಕೊಪ್ಪಳ ಕೃಷಿ ವಿಸ್ತರಣಾ ಕೇಂದ್ರ ಪ್ರಾಧ್ಯಾಪಕ ಡಾ.ಎಂ.ವಿ.ರವಿ, ಜಂಟಿ ಕೃಷಿ ನಿರ್ದೇಶಕ ಟ.ಎಸ್.ರುದ್ರೇಶಪ್ಪ, ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಹಿರಿಯ ಸಹಾಯಕ ನಿರ್ದೇಶಕ ಲಿಂಗನಗೌಡ ಪಾಟೀಲ್ ಪ್ರಮುಖರಾದ ವೇಣುಗೋಪಾಲರಾವ್, ಅಶೋಕ ಸಜ್ಜನ್, ಹನುಮಗೌಡ ಪಾಟೀಲ್, ಯಂಕಣ್ಣ ಯರಾಶಿ, ಹನುಮಂತಪ್ಪ ದಾಸನಳ್ಳಿ, ವಾಮನಮೂರ್ತಿ, ಪ್ರಕಾಶ ಬಣಕಾರ, ಫಕೀರಪ್ಪ ಲಿಂಗದಳ್ಳಿ, ರಾಮಪ್ಪ ಹಂಚಿನಾಳ, ಸುರೇಶ ಚೌಡ್ಕಿ ಇತರರಿದ್ದರು.

ಆಧುನಿಕ ಜೀವನ ಪದ್ಧತಿಯಿಂದ ಮಾನವನ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಆರೋಗ್ಯ ಸುಧಾರಣೆಗೆ ನಿತ್ಯದ ಆಹಾರದಲ್ಲಿ ಸಿರಿಧಾನ್ಯ ಬಳಕೆಯಾಗಬೇಕು. ಎಲ್ಲರೂ ಆರೋಗ್ಯ ಕಾಪಾಡಿಕೊಳ್ಳಬೇಕು.ಶ್ರೀ ವಿಜಯ ಮಹಾಂತ ಸ್ವಾಮೀಜಿಮೈಸೂರು ಮಠ, ಕುದರಿಮೋತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net