ಕೃಷಿ ಇಲಾಖೆ ಅಧಿಕಾರಿಗಳಿಂದ ತಪ್ಪು ಮಾಹಿತಿ

30LNG01
ಲಿಂಗಸುಗೂರು ಎಸಿ ಬಸವಣೆಪ್ಪ ಕಲಶೆಟ್ಟಿಗೆ ತಾಲೂಕು ವಕೀಲ ಸಂಘ ನೇತೃತ್ವದಲ್ಲಿ ನ್ಯಾಯವಾದಿಗಳು ಮನವಿ ಸಲ್ಲಿಸಿದರು. ವಕೀಲರ ಸಂಘದ ತಾಲೂಕು ಅಧ್ಯಕ್ಷ ಭೂಪನಗೌಡ ಪಾಟೀಲ್, ಉಪಾಧ್ಯಕ್ಷ ಬಸವಲಿಂಗಯ್ಯ ವಸ್ತ್ರದ್, ಕಾರ್ಯದರ್ಶಿ ಬಾಲರಾಜ ಸಾಗರ, ವಕೀಲರಾದ ನಾಗರಾಜ ಗಸ್ತಿ, ವೀರಭದ್ರಪ್ಪ, ಶರಣಬಸವ ಪಟ್ಟಣಶೆಟ್ಟಿ, ಸಂಜೀವಮೂರ್ತಿ ತಾರಿವಾಳ, ಮಧು ನಾಡಗೌಡ, ಮೋಯಿನ್ ಪಟೇಲ್, ಗಿರೀಶ ಜೋಷಿ, ಕರವೇ ತಾಲೂಕು ಅಧ್ಯಕ್ಷ ಜಿಲಾನಿಪಾಶಾ, ಹನುಮಂತ ನಾಯಕ, ಅಜೀಜ್ ಪಾಶಾ ಇದ್ದರು.
Published on

ಲಿಂಗಸುಗೂರು: ಸರ್ಕಾರಕ್ಕೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಿ, ಸ್ಥಳೀಯ ಉಪ ಕೃಷಿ ನಿರ್ದೇಶಕ ಕಚೇರಿ-2 ಸ್ಥಳಾಂತರಕ್ಕೆ ಆದೇಶ ಪಡೆದಿದ್ದು, ಇದನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ತಾಲೂಕು ವಕೀಲ ಸಂಘದ ನೇತೃತ್ವದಲ್ಲಿ ನ್ಯಾಯವಾದಿಗಳು ಎಸಿ ಬಸವಣೆಪ್ಪ ಕಲಶೆಟ್ಟಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಸಿಂಧನೂರು ಮತ್ತು ಮಸ್ಕಿ ತಾಲೂಕುಗಳಿಗಿಂತ ಲಿಂಗಸುಗೂರು ತಾಲೂಕು ಭೌಗೋಳಿಕ ವಿಸ್ತೀರ್ಣ, ಕೃಷಿ ಸಂಬಂಧಿತ ಚಟುವಟಿಕೆಗಳು ಹಾಗೂ ವಹಿವಾಟಿನಲ್ಲಿ ಕಡಿಮೆ ಇದೆ ಎಂದು ತಪ್ಪು ಮಾಹಿತಿ ನೀಡಲಾಗಿದೆ.

ಮತ್ತು ಲಿಂಗಸುಗೂರಿನಿಂದ ಸಿಂಧನೂರು 55ಕಿಮೀ ಇದ್ದರೂ, 90 ಕಿಮೀ ಅಂತರ ಇದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಆಯುಕ್ತರಿಗೆ ಮಾಹಿತಿ ನೀಡಿರುವುದು ಖಂಡನೀಯ.

ಸ್ವಾತಂತ್ರ್ಯ ಪೂರ್ವ ಬ್ರಿಟೀಷ ಆಡಳಿತ ಅವಧಿಯಲ್ಲಿ ಜಿಲ್ಲಾ ಕೇಂದ್ರವಾಗಿದ್ದು, ಇದೀಗ ಸಹಾಯಕ ಆಯುಕ್ತರ ಕಂದಾಯ ಉಪವಿಭಾಗ ಆಡಳಿತ ನಡೆಸುತ್ತಿದೆ. ಆದರೆ, ರಾಜಕೀಯ ಒತ್ತಡದಿಂದ ಕೃಷಿ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ್ದರಿಂದ ಸರ್ಕಾರ ಉಪ ಕೃಷಿ ನಿರ್ದೇಶಕ ಕಚೇರಿ-2ನ್ನು ಸಿಂಧನೂರಿಗೆ ಸ್ಥಳಾಂತರಿಸಲು ಆದೇಶ ಹೊರಡಿಸಿದೆ.

ಸರ್ಕಾರ ಕೂಡಲೇ ಸತ್ಯ ತಿಳಿದು ಆದೇಶ ಹಿಂಪಡೆಯಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ವಕೀಲರ ಸಂಘದ ತಾಲೂಕು ಅಧ್ಯಕ್ಷ ಭೂಪನಗೌಡ ಪಾಟೀಲ್, ಉಪಾಧ್ಯಕ್ಷ ಬಸವಲಿಂಗಯ್ಯ ವಸ್ತ್ರದ್, ಕಾರ್ಯದರ್ಶಿ ಬಾಲರಾಜ ಸಾಗರ,

ವಕೀಲರಾದ ನಾಗರಾಜ ಗಸ್ತಿ, ವೀರಭದ್ರಪ್ಪ, ಶರಣಬಸವ ಪಟ್ಟಣಶೆಟ್ಟಿ, ಸಂಜೀವಮೂರ್ತಿ ತಾರಿವಾಳ, ಮಧು ನಾಡಗೌಡ, ಮೋಯಿನ್ ಪಟೇಲ್, ಗಿರೀಶ ಜೋಷಿ, ಕರವೇ ತಾಲೂಕು ಅಧ್ಯಕ್ಷ ಜಿಲಾನಿಪಾಶಾ, ಹನುಮಂತ ನಾಯಕ, ಅಜೀಜ್ ಪಾಶಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net