

ಸಿರವಾರ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ದೇವಪುತ್ರ ಹಾಗೂ ಉಪಾಧ್ಯಕ್ಷರಾಗಿ ಬಸ್ಸಪ್ಪಗೌಡ ನಂದರೆಡ್ಡಿ ಅವಿರೋಧವಾಗಿ ಆಯ್ಕೆಯಾದರು. ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡರು ಸಹಕಾರಿ ಸಂಘವನ್ನು ಅಭಿವೃದ್ಧಿ ಪಡಿಸುವುದಾಗಿ ದೇವಪುತ್ರ ಹೇಳಿದರು. ಪ್ರಮುಖರಾದ ಅಬ್ರಾಹಂ ಹೊನ್ನುಟಗಿ, ಎಂ.ಪ್ರಕಾಶಪ್ಪ, ಮತ್ತಾಯಪ್ಪ, ಮಲ್ಲಪ್ಪ ಜಿಂದಾವಲಿ, ಜಯರಾಜ್ ಜಕ್ಕಲದಿನ್ನಿ, ಜಯಪ್ಪ ಕೆಂಪು ಇತರರಿದ್ದರು.