

ಅಳವಂಡಿ: ರೈತರು ಕೃಷಿಯಲ್ಲಿ ಆಧುನಿಕ ತಾಂತ್ರಿಕತೆಯನ್ನು ಅಳವಡಿಸಿಕೊಂಡು ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಕವಿತಾ ಹೇಳಿದರು.
ಇದನ್ನೂ ಓದಿ: ಸಾಲಬಾಧೆ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ
ಗ್ರಾಮದಲ್ಲಿ ಕೃಷಿ ವಿಜ್ಞಾನ ಕೇಂದ್ರ ಗಂಗಾವತಿಯಿಂದ ಆಯೋಜಿಸಿದ್ದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.
ಆಧುನಿಕ ಕೃಷಿ, ಕೃಷಿ ಯಂತ್ರೋಪಕರಣ, ನೈಸರ್ಗಿಕ ಕೃಷಿ ಪದ್ಧತಿ ಹಾಗೂ ವಿವಿಧ ಬೆಳೆಗಳ ವೈವಿಧ್ಯತೆ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವಲ್ಲಿ ಈ ಅಭಿಯಾನ ಪ್ರಮುಖ ಪಾತ್ರ ವಹಿಸುತ್ತದೆ ಮನೆಯ ಆವರಣದಲ್ಲಿ ಹಾಗೂ ಜಮೀನಿನಲ್ಲಿ ಹೆಚ್ಚಾಗಿ ತರಕಾರಿಗಳನ್ನು ಬೆಳೆಯಬೇಕು.
ರೈತ ಉತ್ಪಾದಕ ಸಂಘ ಸ್ಥಾಪಿಸುವ ಮೂಲಕ ವ್ಯವಹಾರ ಮಾಡಿ, ಅಭಿವೃದ್ಧಿ ಹೊಂದಬೇಕು. ಕೃಷಿಯಲ್ಲಿ ಬದಲಾವಣೆಯಾಗುವ ಮೂಲಕ ಆರ್ಥಿಕವಾಗಿ ಸದೃಢರಾಗಿ ಎಂದರು.
ಗಂಗಾವತಿಯ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಜ್ಯೋತಿ ಮಾತನಾಡಿ, ರೈತರು ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಕೃಷಿ ಸಮುದಾಯಕ್ಕೆ ಸಾವಯವ, ನೈಸರ್ಗಿಕ ಕೃಷಿಯಲ್ಲಿ ಮಣ್ಣಿನ ಫಲವತ್ತತೆ ಕಾಪಾಡುವಲ್ಲಿ ಎರೆಹುಳುಗಳು ಸಹಯವಾಗುತ್ತವೆ.
ಕ್ಷೇತ್ರ ಬೆಳೆಗಳ ಜೊತೆಗೆ ತೋಟಗಾರಿಕೆ ಬೆಳೆಗಳ ಬೆಳೆದಾಗ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗಲಿದೆ. ಹಣ್ಣು ಹಾಗೂ ಹೂವಿನ ಬೆಳೆಗಳನ್ನು ಬೆಳೆಯುವ ಮೂಲಕ ಆದಾಯದಲ್ಲಿ ಅಭಿವೃದ್ಧಿ ಹೊಂದಬೇಕು. ರೈತರು ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದರು.
ವಿಜ್ಞಾನಿ ಸುಂಕಾತ ಮಾಂಡಲ್, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಕೃಷಿ ಅಧಿಕಾರಿ ಗವಿಸಿದಯ್ಯ ಹಿರೇಮಠ, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪ್ರತಾಪಗೌಡ ನಂದನಗೌಡ, ಆತ್ಮ ಯೋಜನೆಯ ತಾಂತ್ರಿಕ ಸಹಾಯಕಿ ತಾರಾ, ಪ್ರಮುಖರಾದ ಮಲ್ಲಮ್ಮ ಭಾವಿಹಳ್ಳಿ, ಜಯಶ್ರೀ ಹಂಚಿನಾಳ, ಕಾವೇರಿ, ಗೀತಾ, ಸಲ್ಮಾ, ರೇಖಾ ಕಣವಿ, ಸೈನಾಜ್, ಮಂಜುಳಾ, ಚನ್ನಮ್ಮ, ದೀಪಾ, ನೀಲಮ್ಮ , ಶಾಂತವ್ವ ಇತರರಿದ್ದರು.