ಬಂಜರು ಭೂಮಿಯಲ್ಲಿ ಬಂಗಾರದ ಬೆಳೆ

11kglphoto-4,,
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 39;
Published on

ಕೊಳ್ಳೇಗಾಲ:  ಕಲ್ಲು, ಮಣ್ಣಿನಿಂದ ಕೂಡಿರುವ ಗುಡ್ಡಗಾಡಿನಲ್ಲಿ ಬೆಳೆಯುತ್ತಿರುವ ಬೆಳೆ ಮಾದಪ್ಪನ ಗುಡಿಗೆ ಪ್ರಸಾದವಾಗುತ್ತಿದೆ. ನೀರಾವರಿ ಸೌಲಭ್ಯವಿಲ್ಲದ ಮಳೆಯಾಶ್ರಿತ ಬಂಜರು ಭೂಮಿಯಲ್ಲಿ ಬಂಗಾರದಂತಹ ಫಸಲು ಬೆಳೆಯಲಾಗುತ್ತಿದೆ.

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ದೀಪದಗಿರಿ ಒಡ್ಡು 108 ಅಡಿ ಎತ್ತರದ ಮಲೆ ಮಹದೇಶ್ವರ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ಅಚ್ಚರಿಯ ಜಾಗ ಮಾತ್ರವಲ್ಲ. ವಿಗ್ರಹದ ಬುಡದಲ್ಲೇ ನೆಲೆ ನಿಂತಿರುವ ಮಾದಪ್ಪನ ಮಕ್ಕಳ ಬದುಕು ಮತ್ತು ಕಾಯಕದ ಭೂಮಿ. ಈ ಬೆಟ್ಟದ ಮೇಲೊಂದು ಮನೆ ಮಾಡಿಕೊಂಡು, ಕೃಷಿ ನಂಬಿಕೊಂಡು ಬದುಕುತ್ತಿರುವ ಮಾದೇಶ್ ಮತ್ತು ದೇವಿ ದಂಪತಿ ಬೇಡಗಂಪಣ ಕುಲದವರು. ಮಾದಪ್ಪನಿಗೆ ಪೂಜೆ ಮಾಡುವ ತಮ್ಮಡಿಗಳಾಗಿರುವ ಇವರು ತಾವು ಬೆಳೆದ ಬೆಳೆಯಲ್ಲಿ ಒಂದಿಷ್ಟು ಭಾಗವನ್ನು ಸ್ವಾಮಿಯ ಪ್ರಸಾದಕ್ಕೆ ಉದಾರವಾಗಿ ಭಕ್ತಿಯಿಂದ ನೀಡುತ್ತಾರೆ. ಹೀಗಾಗಿ ತಮಗಾಗಿ ಮಾತ್ರವಲ್ಲದೆ, ದೇವರ ಪ್ರಸಾದ ಸೇವೆಗಾಗಿಯೂ ಕೃಷಿ ಮಾಡುವ ಭಕ್ತ ರೈತ ಕುಟುಂಬ ಇರುವುದೇ ಒಂದು ವಿಶೇಷ.

ನೈಸರ್ಗಿಕ ಕೃಷಿಯಲ್ಲಿ ಹಲವು ಬೆಳೆ: ಗುಡ್ಡದಲ್ಲಿರುವ ಮೂರುವರೆ ಎಕರೆ ಜಮೀನಿನಲ್ಲಿ ರಾಗಿ, ಭತ್ತ, ಮೂಲಂಗಿ, ಕ್ಯಾರೆಟ್, ಸೊಪ್ಪುಗಳು, ಅವರೆಕಾಯಿ, ಟೊಮ್ಯಾಟೋ, ಮೆಣಸಿನಕಾಯಿ, ಬೀನ್ಸ್, ಸೋರೆಕಾಯಿ, ಬದನೆಕಾಯಿ ಇನ್ನಿತರ ಫಸಲನ್ನು ಇವರು ಬೆಳೆದಿದ್ದಾರೆ. ಕಳೆದ ಸಲ ರಾಗಿ, ಭತ್ತ ಬೆಳೆದಿದ್ದರು. ಅಕ್ಕಿಯನ್ನು ಮನೆ ಬಳಕೆ ಮತ್ತು ಮಹದೇಶ್ವರ ದೇವಸ್ಥಾನದಲ್ಲಿ ತಮ್ಮ ಸರದಿ ಬಂದಾಗ ಪ್ರಸಾದ ತಯಾರಿಕೆಗೆ ಬಳಕೆ ಮಾಡಲು ಇಟ್ಟುಕೊಂಡಿದ್ದಾರೆ.

ನೈಸರ್ಗಿಕ ವಿಧಾನದಲ್ಲಿ ಕೃಷಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಇವರ ಭೂಮಿ ರಾಸಾಯನಿಕಮುಕ್ತವಾಗಿದೆ. ನೀರಾವರಿ ಸೌಲಭ್ಯವಿಲ್ಲದೆ ಮಳೆಯನ್ನೇ ಆಶ್ರಯಿಸಿರುವ ಭೂಮಿ ಜೀವಂತಿಕೆಯಿಂದ ಕೂಡಿದೆ ಎಂಬುದೇ ಗಮನೀಯ ಸಂಗತಿ. ಕೊಟ್ಟಿಗೆ ಗೊಬ್ಬರದ ಬಳಕೆಯಿಂದಾಗಿ ಮಣ್ಣಿನಲ್ಲಿ ಲವತ್ತತೆ ಇದೆ. ಜಮೀನಿನಲ್ಲಿ ಬೆಳೆದ ರಾಗಿ ಸಮೃದ್ಧವಾಗಿ ತೆನೆ ಕಟ್ಟುತ್ತಿದೆ. ಅವರೆಕಾಯಿ ನೆಲದ ತುಂಬೆಲ್ಲಾ ಹಬ್ಬಿ ಹೂ ಬಿಟ್ಟಿದೆ. ಗಿಡದಲ್ಲಿ ಬೀನ್ಸ್, ಮೆಣಸಿನಕಾಯಿ ಜೋತು ಬಿದ್ದಿವೆ. ಮೂಲಂಗಿ, ಕ್ಯಾರೆಟ್ ರೋಗಬಾಧೆ ಇಲ್ಲದೆ ನಳನಳಿಸುತ್ತಿವೆ.

 ಗುಡ್ಡಗಾಡು ವ್ಯವಸಾಯದಲ್ಲಿ ಬೆಟ್ಟದಷ್ಟು ಸವಾಲುಗಳು : ಕುಡಿಯುವ ನೀರಿಗಾಗಿಯೇ ಪರದಾಡುವ ಗುಡ್ಡಗಾಡಿನಲ್ಲಿ ಕೃಷಿ ಮಾಡುವುದು ಸುಲಭದ ಮಾತಲ್ಲ. ಸಾಲು ಸಾಲು ಬೆಟ್ಟದಷ್ಟು ಸವಾಲುಗಳ ನಡುವೆ ಫಸಲು ತೆಗೆಯುವುದು ಎಂದರೆ ಅದು ಸಾಮಾನ್ಯದ ವಿಷಯವಲ್ಲ. ಬೆಳೆಗೆ ನೀರಿಲ್ಲ. ಬೋರ್ ವ್ಯವಸ್ಥೆ ಇಲ್ಲ. ಬೇಸಿಗೆ ಕಾಲ, ಚಳಿಗಾಲ, ಮಳೆಗಾಲಕ್ಕೆ ಅನುಗುಣವಾಗಿ ಕೃಷಿ ಮಾಡಬೇಕು. ಬೇಸಿಗೆ ಕಾಲದಲ್ಲಿ ಬಿಸಿಲಿನ ತಾಪಕ್ಕೆ ಭೂಮಿಯಲ್ಲಿ ತೇವಾಂಶ ಕಡಿಮೆ ಆಗಿ ಬೆಳೆ ಒಣಗುವಾಗ ಗುಡ್ಡದ ಕೆಳಗಿರುವ ತೊಂಬೆಗಳಲ್ಲಿ ನೀರನ್ನು ಬಿಂದಿಗೆಗಳಲ್ಲಿ ಹಿಡಿದು, ಹೊತ್ತುಕೊಂಡು ತಂದು ಬೆಳೆಗೆ ಒದಗಿಸಬೇಕು. ಆಧುನಿಕ ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಸುಲಭ ಬೇಸಾಯಕ್ಕೆ ದಾರಿ ಮಾಡಿಕೊಡುತ್ತಿದೆ. ಇಂತಹ ವೈಜ್ಞಾನಿಕ ಯುಗದಲ್ಲಿ ಯಂತ್ರಗಳನ್ನು ಖರೀದಿಸಿ ಕೃಷಿ ಮಾಡುವುದಕ್ಕೆ ಗುಡ್ಡಗಾಡಿನ ಜನರಿಗೆ ಆರ್ಥಿಕ ಸ್ಥಿತಿ ಅಡ್ಡಿಯಾಗಿದೆ. ಹೀಗಾಗಿ ಸಾಂಪ್ರದಾಯಿಕವಾಗಿ ನಾಟಿ ದನಗಳನ್ನು ಬಳಸಿಕೊಂಡು ಉಳುಮೆ ಮಾಡಿ ಕೃಷಿ ಮಾಡಲಾಗುತ್ತಿರುವುದು ವಿಶೇಷವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net