

ಕಂಪ್ಲಿ: ರೈತರ ಅನುಕೂಲಕ್ಕಾಗಿ ಸೂಕ್ಷ್ಮ ನೀರಾವರಿ ಘಟಕ ಯೋಜನೆ, ಕೃಷಿ ಯಾಂತ್ರೀಕರಣ ಯೋಜನೆಗಳಡಿ ಕೃಷಿ ಇಲಾಖೆ ಅರ್ಜಿ ಆಹ್ವಾನಿಸಿದೆ.
ಸೂಕ್ಷ್ಮ ನೀರಾವರಿ ಘಟಕ ಯೋಜನೆಯಡಿ, ಗರಿಷ್ಠ ಎರಡೂವರೆ ಎಕರೆಗೆ ಶೇ.90 ರಿಯಾಯಿತಿ ದರದಲ್ಲಿ ತುಂತುರು ನೀರಾವರಿ ಸೌಲಭ್ಯ, ಕೃಷಿ ಯಾಂತ್ರೀಕರಣ ಯೋಜನೆಡಿ ಕೃಷಿ ಸಲಕರಣೆ, ಟ್ರ್ಯಾಕ್ಟರ್ ಸಾಮಗ್ರಿಗಳಿಗೆ ಶೇ.50ರ ದರದಲ್ಲಿ ಕೊಳ್ಳಲು ಸಾಮಾನ್ಯ ರೈತರು ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಎಂದು ಕೇಂದ್ರದ ಕೃಷಿ ಅಧಿಕಾರಿ ಶ್ರೀಧರ ತಿಳಿಸಿದ್ದಾರೆ.