ರೈತ ಮಹಿಳೆಯರಿಗೆ ವಿಶೇಷ ತರಬೇತಿ

tubagere
Agricultural Women's Day
Published on

ವಿಜಯವಾಣಿ ಸುದ್ದಿಜಾಲ ತೂಬಗೆರೆ
ರೈತ ಮಹಿಳೆಯರಿಗೆ ಕೌಶಲಾಭಿವೃದ್ಧಿ ಯೋಜನೆಯಡಿ ಉದ್ದಿಮೆ ಆರಂಭಿಸಲು ಸಾಕಷ್ಟು ಅವಕಾಶಗಳಿದ್ದು, ಅವುಗಳನ್ನು ಸದ್ಬಳಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಬಿ.ಜಿ. ಹನುಮಂತರಾಯ ತಿಳಿಸಿದರು.
ಹೋಬಳಿಯ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬೆಂ.ಗ್ರಾಮಾಂತರ ಜಿಲ್ಲೆ ಮತ್ತು ಕೌಶಲಾಭಿವೃದ್ಧಿ ಘಟಕ, ತೋಟಗಾರಿಕಾ ವಿಭಾಗ, ಕೃಷಿ ಕಾಲೇಜು, ಕೃಷಿ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಆಯೋಜಿದ್ದ ಕೃಷಿ ನಿರತ ಮಹಿಳಾ ದಿನದಲ್ಲಿ ಮಾತನಾಡಿದರು.
ಪ್ರಾಧ್ಯಾಪಕಿ ಡಾ. ಆರ್. ವಸಂತ ಕುಮಾರಿ, ಸಹಾಯಕ ಪ್ರಾಧ್ಯಾಪಕಿ ಡಾ. ಸಿ. ಸುನೀತಾ, ರೈತ ಮಹಿಳೆಯರಿಗೆ ಹೂವು ಜೋಡಣೆಯ ಕುರಿತು ಮಾಹಿತಿ ನೀಡಿದರು. ಭಾಗವಹಿಸಿದ್ದ ರೈತ ಮಹಿಳೆಯರು ಸ್ವತಃ ಹೂವಿನ ಗುಚ್ಛಗಳನ್ನು ತಯಾರಿಸಿ ಪ್ರದರ್ಶಿಸಿದರು.
ರೈತ ಮಹಿಳೆಯರಿಗೆ ತರಬೇತಿ ಪ್ರಮಾಣ ಪತ್ರ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net