ಖಾಸಗಿ ಕೃಷಿ ಕಾಲೇಜುಗಳ ಆರಂಭಕ್ಕೆ ಅನುಮತಿಗೆ ವಿರೋಧ; ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭಟನೆ

29 Dwd 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಖಾಸಗಿ ಕೃಷಿ ಕಾಲೇಜುಗಳ ಆರಂಭಕ್ಕೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ನಗರದ ಕೃಷಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಖಾಸಗಿ ಕಾಲೇಜುಗಳಿಗೆ ಅನುಮತಿ ನೀಡುವ ಸಂಬAಧ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಅಽಕಾರಿಗಳು ಆಡಳಿತ ಮಂಡಳಿಗಳ ಸಭೆ ಕರೆದಿದೆ. ಎಐಸಿಟಿಇ ಅನುಮತಿಯೊಂದಿಗೆ ಖಾಗಿ ಇಂಜಿನಿಯರಿAಗ್ ಕಾಲೇಜುಗಳಿಂದ ಪದವಿ ಪಡೆದ ವಿದ್ಯಾರ್ಥಿಗಳು ಕೃಷಿ ಇಲಾಖೆಯ ಸರ್ಕಾರಿ ನೌಕರಿಗೆ ಈಗಾಗಲೇ ಅರ್ಹತೆ ಪಡೆದಿದ್ದಾರೆ. ಇದೀಗ ಖಾಸಗಿ ಕೃಷಿ ಕಾಲೇಜುಗಳಿಗೆ ಅನುಮತಿ ನೀಡಲು ಹೊರಟಿರುವುದು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುವಂತಿದೆ. ದೇಶಾದ್ಯಂತ ಕೃಷಿ ಪದವೀಧರರ ಸಂಖ್ಯೆ ಹೆಚ್ಚಾಗಿದ್ದು, ನಿರುದ್ಯೋಗ ಸಮಸ್ಯೆ ಅಽಕವಾಗಿದೆ. ಆದರೂ ಕೃಷಿ ಇಲಾಖೆಯಿಂದ ನೇಮಕಾತಿ ನಡೆಯುತ್ತಿಲ್ಲ. ಕೃಷಿ ವಿಶ್ವವಿದ್ಯಾಲಯ ಅಽಕಾರಿಗಳು ತರಾತುರಿಯಲ್ಲಿ ಖಾಸಗಿ ಕಾಲೇಜುಗಳನ್ನು ಸ್ಥಾಪಿಸಲು ಹೊರಟಿರುವುದು ವಿದ್ಯಾರ್ಥಿಗಳನ್ನು ವಂಚಿಸುವAತಿದೆ. ಖಾಸಗಿ ಕಾಲೇಜು ಸ್ಥಾಪನೆಗೆ ಅನುಮತಿ ನೀಡಬಾರದು ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್ ಪಾಟೀಲ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ದರ್ಶನ ಎಚ್.ಪಿ., ಇಂದುಮತಿ ಎಂ., ಸನತ್ ತೋಟಿಗೇರ, ಪ್ರಜ್ವಲ ಸಿಂಧೂರ, ಚಿರಂತನ ದ್ರಾವಿಡ್, ಬಿಂದು ಚೌಧರಿ, ರೋಹಿತ್ ಕೊಟಗಿ, ತೇಜಸ್ವಿನಿ ಪವಾರ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net