ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನ ಕಡಬ ತಾಲೂಕು ಬಿಳಿನೆಲೆ ವಲಯ ಕೊಣಾಜೆ ಕಾರ್ಯಕ್ಷೇತ್ರದ ವತಿಯಿಂದ ಕೊಣಾಜೆ ಭಜನಾ ಮಂದಿರದಲ್ಲಿ ರೈತ ಕ್ಷೇತ್ರ ಪಾಠ ಶಾಲಾ ಕಾರ್ಯಕ್ರಮದಡಿ ನೆಲ ಜಲ ಸಂರಕ್ಷಣೆ ಹಾಗೂ ಮಳೆ ಕೊಯ್ಲು ಕೃಷಿ ತರಬೇತಿ ಕಾರ್ಯಕ್ರಮ ಹಾಗೂ ಲಾಭಾಂಶ ವಿತರಣೆ ಕಾರ್ಯಕ್ರಮ ನಡೆಯಿತು.
ಒಕ್ಕೂಟದ ಅಧ್ಯಕ್ಷ ಡೀಕಯ್ಯ ಗೌಡ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ಚಿದಾನಂದ ಕೃಷಿಯಲ್ಲಿ ಸಾವಯವ ಗೊಬ್ಬರ, ಜೀವಾಮೃತದ ಬಳಕೆ, ಮಣ್ಣಿನ ಪರೀಕ್ಷೆ ಹಾಗೂ ನೆಲ ಜಲ ಸಂರಕ್ಷಣೆ ಕೊಯ್ಲು ಮರುಪೂರಣ ಬಗ್ಗೆ ಮಾಹಿತಿ ನೀಡಿದರು. ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಸದಸ್ಯರಿಗೆ ಲಾಭಾಂಶ ವಿತರಿಸಿದರು. ಕಡಬ ತಾಲೂಕು ಕೃಷಿ ಮೇಲ್ವಿಚಾರಕ ಸೋಮೇಶ್ ಪ್ರಸ್ತಾವಿಸಿದರು. ನಾಗವೇಣಿ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಬೇಬಿ ವಂದಿಸಿದರು.