

ಬೆಳ್ತಂಗಡಿ: ಶ್ರೀ ಧರ್ಮಸ್ಧಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಡಿಲೈತ್ ಬೆಂಗಳೂರು ಹಾಗೂ ಐಎಸ್ಟಿಇ ಸಹಭಾಗಿತ್ವದೊಂದಿಗೆ ಕೃಷಿ ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃದ್ಧಿ ಕುರಿತು ಇನೊವೇಟ್-ಥಾನ್ ಎಂಬ ಎರಡು ದಿನದ ಹ್ಯಾಕಥಾನ್ ನಡೆಯಿತು.
ಇನ್ಫೋಸಿಸ್ನ ಹಿರಿಯ ತಾಂತ್ರಿಕ ಆರ್ಕಿಟೆಕ್ಟ್ ಕಾಟಮಯ್ಯ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ದೈನಂದಿನ ಸಮಸ್ಯೆಗಳಿಗೆ ತಾಂತ್ರಿಕ ಹಿನ್ನೆಲೆಯಲ್ಲಿ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳಬೇಕು ಎಂದರು.
ಡಿಲೈತ್ ಸಹ ಸಂಸ್ಥಾಪಕ ಅರುಣ್ರಾಜ್ ಪುರೋಹಿತ್ ಹ್ಯಾಕಥಾನ್ನ ಪ್ರಾಮುಖ್ಯತೆ ತಿಳಿಸಿದರು. ಡೆವಲಪ್ಮೆಂಟ್ ಇಂಜಿನಿಯರ್ ದೀಪಕ್ ಮಂಗಳೂರು ಮತ್ತು ಹಿರಿಯ ನೇಮಕಾತಿ ಅಧಿಕಾರಿ ಅರ್ಪಿತಾ ತೀರ್ಪುಗಾರರಾಗಿದ್ದರು. ಕಾಲೇಜಿನ 23 ತಂಡಗಳು ಭಾಗವಹಿಸಿದ್ದವು.
ಉಪನ್ಯಾಸಕಿ ಲಾರೈನ್ ಕಾರ್ಯಕ್ರಮ ನಿರೂಪಿಸಿದರು. ಮೆಕಾನಿಕಲ್ವಿಭಾಗದ ಮುಖ್ಯಸ್ಥ ಡಾ.ಗಿರೀಶ್ಕುಮಾರ್ ಉಪಸ್ಥಿತರಿದ್ದರು. ಸಿವಿಲ್ ವಿಭಾಗದ ಸಹ ಪ್ರಾಧ್ಯಾಪಕ ವಿನಯ್ ಮತ್ತು ರಾಮ್ಪ್ರಸಾದ್ ಕಾರ್ಯಕ್ರಮ ಸಂಯೋಜಿಸಿದ್ದರು.