ರೈತರೆಡೆ ನಮ್ಮ ನಡೆ ಸಾಧಕ ರೈತರಿಗೆ ಗೌರವಾರ್ಪಣೆ

sanmana raitha
Published on

ಕೋಟ: ಪಂಚವರ್ಣ ಯುವಕಮಂಡಲ ಕೋಟ ನೇತೃತ್ವದಲ್ಲಿ ರೈತರೆಡೆ ನಮ್ಮ ನಡೆ ಎಂಬ ಶೀರ್ಷಿಕೆಯ ತಿಂಗಳ ಸರಣಿ ಕಾರ್ಯಕ್ರಮದಲ್ಲಿ ಭಾನುವಾರ ಕೋಟತಟ್ಟು ಪಡುಕರೆ ಸಾಧಕ ರೈತ ಸಂಶೋಧಕ ಕೃಷಿಕ ಶಿವಮೂರ್ತಿ ಕೆ. ಹಾಗೂ ಶಂಕರಮೂರ್ತಿ ಸಹೋದರರನ್ನು ಅವರ ಮನೆಯಲ್ಲಿ ಗೌರವಿಸಲಾಯಿತು. ಗಿಳಿಯಾರು ಯುವಕ ಮಂಡಲ ಗಿಳಿಯಾರು, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ, ಗೀತಾನಂದ ಫೌಂಡೇಶನ್ ಮಣೂರು, ರೈತಧ್ವನಿ ಕೋಟ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್ ಸನ್ಮಾನ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ನಿಯೋಜಿತ ಅಧ್ಯಕ್ಷ ವೆಂಕಟೇಶ ಭಟ್, ರೈತಧ್ವನಿ ಕೋಟ ಅಧ್ಯಕ್ಷ ಜೈರಾಮ್ ಶೆಟ್ಟಿ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇದರ ಸಂಚಾಲಕಿ ವನೀತಾ ಉಪಾಧ್ಯ, ಗಿಳಿಯಾರು ಯುವಕ ಮಂಡಲ ಅಧ್ಯಕ್ಷ ರಾಘವೇಂದ್ರ ಕುಂದರ್, ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಗಿರೀಶ್ ಆಚಾರ್ಯ, ಸ್ಥಾಪಕಾಧ್ಯಕ್ಷ ಸುರೇಶ್ ಗಾಣಿಗ, ಸಲಹಾ ಸಮಿತಿಯ ಪ್ರಮುಖರಾದ ಚಂದ್ರ ಆಚಾರ್ಯ, ಉಮೇಶ್ ಪ್ರಭು, ಕಾರ್ಯದರ್ಶಿ ಅಜಿತ್ ಆಚಾರ್ಯ, ಜತೆಕಾರ್ಯದರ್ಶಿ ಸಂದೇಶ್ ಆಚಾರ್ಯ, ಕೋಶಾಧಿಕಾರಿ ನಾಗರಾಜ್ ಪೂಜಾರಿ, ಸಾಲಿಗ್ರಾಮ ವಿಪ್ರ ಮಹಿಳಾ ಬಳಗದ ಸುಜಾತ ಬಾಯಿರಿ, ಕೋಟ ಶಾಂಭವೀ ಶಾಲಾ ಮುಖ್ಯಶಿಕ್ಷಕ ದಿವಾಕರ ರಾವ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಂಚವರ್ಣ ಯುವಕ ಮಂಡಲ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ಪಂಚವರ್ಣ ಯುವಕ ಮಂಡಲ ಕೋಟ ಹಾಗೂ ನಮ್ಮೆಲ್ಲ ಸಂಸ್ಥೆಗಳ ಸಹಕಾರದೊಂದಿಗೆ ರೈತ ಸನ್ಮಾನ ಕಾರ್ಯಕ್ರಮ ಆಯೋಜಿಸಿರುವುದು ರೈತ ಕಾಯಕಕ್ಕೆ ಇನ್ನಷ್ಟು ವೇಗ ನೀಡಿದಂತೆ. ಶಿವಮೂರ್ತಿ ಸಹೋದರರು ಕೃಷಿ ಕ್ಷೇತ್ರದಲ್ಲಿ ಆವಿಷ್ಕಾರ ನಡೆಸಿ ಹೊಸ ಭಾಷ್ಯ ಬರೆದಿದ್ದಾರೆ.

ಆನಂದ್ ಸಿ ಕುಂದರ್, ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net