

ಹುಬ್ಬಳ್ಳಿ: ಕೃಷಿ ವಿಶ್ವ ವಿದ್ಯಾಲಯದ ವಿಜ್ಞಾನಿಗಳು ಧಾರವಾಡ ತಾಲೂಕಿನ ಗರಗ ಹಾಗೂ ಅಮ್ಮಿನಭಾವಿ ಹೋಬಳಿಯ ವಿವಿಧ ಗ್ರಾಮದ ಜಮೀನುಗಳಿಗೆ ಮಂಗಳವಾರ ಭೇಟಿ ನೀಡಿ ರೈತರಿಗೆ ಅಗತ್ಯ ಮಾರ್ಗದರ್ಶನ ನೀಡಿದರು.
ವಿಜ್ಞಾನಿ ಕಲಾವತಿ ಕಂಬಳಿ, ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ ಅಣಗೌಡರ, ಕೃಷಿ ಅಧಿಕಾರಿಗಳಾದ ಗುರುಪ್ರಸಾದ ಹಿರೇಮಠ, ರೇಖಾ ಬೆಳ್ಳಟ್ಟಿ ನೇತೃತ್ವದ ತಂಡವು ಲೋಕೂರ, ಯಾದವಾಡ, ಕಲ್ಲೂರ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಹೆಸರು, ಉದ್ದು, ಸೋಯಾ, ಆವರೆ ಬೆಳೆಗಳ ಸಂರಕ್ಷಣೆಗೆ ಅಗತ್ಯ ಸಲಹೆ ನೀಡಿದರು.
ರೈತರಾದ ಉಳವಯ್ಯ ಚಿಕ್ಕೊಪ್ಪ, ದ್ಯಾಮಪ್ಪ ರಂಗಣ್ಣವರ, ಪಡೆಪ್ಪ ಬಾಗಲಕೋಟೆ, ನರಸಿಂಗನವರ, ಮಹಾಂತೇಶ ಗಳಗಿ, ಮಡಿವಾಳಪ್ಪ ದಿಂಡಲಕೊಪ್ಪ, ಸಿದ್ರಾಮ ದಂಡಿನ್, ವಿಠ್ಠಲ ಭೋವಿ, ಮಂಜುನಾಥ ಭೀಮಕ್ಕನವರ, ಬಸವರಾಜ ಕಟ್ಟಿಮನಿ ಇತರರು ಇದ್ದರು.