

ಚಿತ್ರದುರ್ಗ: ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಿದರೆ ಗ್ರಾಮೀಣ ಭಾರತ ಅವನತಿಯ ಹಾದಿ ಹಿಡಿಯುತ್ತದೆ ಎಂದು ಸರ್ವೋದಯ ಕರ್ನಾಟಕದ ರಾಜ್ಯಸಂಚಾಲಕ ಜೆ.ಎಂ.ವೀರಸಂಗಯ್ಯ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಸರ್ವೋದಯ ಕರ್ನಾಟಕದ ಜಿಲ್ಲಾ ಕಾರ‌್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿ,ಕೃಷಿ
ಭೂಮಿ ಕಸಿದುಕೊಳ್ಳುವ ಕೇಂದ್ರದ ಹುನ್ನಾರಿಗೆ ಪೂರಕವಾಗಿ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಲಾಗುತ್ತಿದೆ. ರಾಜ್ಯದಲ್ಲಿ 303 ಲಕ್ಷ ಎಕರೆ ಕೃಷಿ ಭೂಮಿ,87 ಲಕ್ಷ ರೈತ ಕುಟುಂಬಗಳಿವೆ. 69ಲಕ್ಷ ಸಣ್ಣ,ಮತ್ತು ಅತಿ ಸಣ್ಣ ಭೂ ಹಿಡುವಳಿದಾರರಿದ್ದಾರೆ. 45 ಲಕ್ಷ ಕೃಷಿ ಪಂಪ್‌ಸೆಟ್‌ಗಳಿದ್ದು,ಇವುಗಳಿಗೆ ಮೀಟರ್ ಆಳವಡಿಸಿದರೆ ಭಾರೀ ಪ್ರಮಾಣದಲ್ಲಿ ತೋಟಗಾರಿಕೆಯಲ್ಲಿರುವ ರೈತರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದರು.
ಗ್ರಾಮೀಣ ಕುಡಿವ ನೀರು ಪೂರೈಕೆ ಘಟಕಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸುವ ಕಾರ‌್ಯಾರಂಭವಾಗಿದೆ. ಕುಡಿವ ನೀರು ಪೂರೈಸುವ ಜವಾ ಬ್ದಾರಿ ಸರ್ಕಾರದ್ದು,ಮೀಟರ್ ಹಾಕಿದರೆ ವಿದ್ಯುತ್ ಬಿಲ್ ಭರಿಸುವ ಹೊಣೆ ಗ್ರಾಮೀಣರ ಮೇಲೆ ಬೀಳಲಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಗ್ರಾಮೀಣ ಭಾರತವನ್ನು ಉಳಿಸಿಕೊಳ್ಳುವುದು ಕಷ್ಟವೆಂಬ ವಾತಾವರಣ ಸೃಷ್ಟಿಯಾಗಿದೆ.
ಗೋ ವಧೆ ನಿಷೇಧ ಕಾಯ್ದೆ ಹೆಸರಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ನಡೆದಿದೆ. ಹೈನುಗಾರಿಕೆಗೂ ತೊಂದರೆಯಾಗಿದೆ. ಅಮೆರಿಕದ ಕಾರ್ಪೋರೇಟ್ ಮಾದರಿ ಕೃಷಿ ಭಾರತದಲ್ಲೂ ಆರಂಭವಾಗುವ ಸುಳಿವುಗಳು ಗೋಚರಿಸಿವೆ ಎಂದು ಆತಂಕ ವ್ಯಕ್ತಪಡಿಸಿದರು. ರಾಜ್ಯರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು
ಎಂ.ಶಂಕರಪ್ಪ,ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ಬಾಬು,ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಸ್ವರಾಜ್ ಇಂಡಿಯಾದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ,ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ,ಮಲ್ಲಾಪುರ ತಿಪ್ಪೇಸ್ವಾಮಿ,ನಿವೃತ್ತ ಪ್ರಾಚಾರ‌್ಯ ಬಿ.ಆರ್.ಶಿವಕುಮಾರ್,ಕಲ್ಲೇನಹಳ್ಳಿಕುಮಾರ್,ಮೋಹನ್ ಎಮ್ಮೆಹಟ್ಟಿ ಇತರರು ಇದ್ದರು.
----