ಕೃಷಿ ಪಂಪ್‌ಸೆಟ್ ವಿದ್ಯುತ್ ಬಿಲ್ ಮನ್ನಾಗೆ ಒತ್ತಾಯ

8Sambaragi4
Published on

ಸಂಬರಗಿ: ಬಾಕಿ ಇರುವ ರೈತರ ಕೃಷಿ ಪಂಪ್‌ಸೆಟ್ ವಿದ್ಯುತ್ ಬಿಲ್ 30 ಕೋಟಿ ರೂ. ಮನ್ನಾ ಮಾಡಬೇಕು. ಇಲ್ಲದಿದ್ದರೆ ಫೆ. 24ರಂದು ಹೆಸ್ಕಾಂ ಮುಖ್ಯ ಕಚೇರಿ ಎದುರು ಅನಿರ್ದಿಷ್ಟವಾಗಿ ಪ್ರತಿಭಟನೆ ಮಾಡಲಾಗುವುದು ಎಂದು ರೈತ ಸಂಘದ ರಾಜ್ಯ ಸಂಚಾಲಕ ರಾಜಕುಮಾರ ಜಂಬಗಿ ಎಚ್ಚರಿಕೆ ನೀಡಿದರು.

ಮಧಬಾವಿ ಗ್ರಾಮದಲ್ಲಿ ಆಯೋಜಿಸಿದ್ದ ಗಡಿಭಾಗದ ರೈತರ ಸಮಾವೇಶ ಹಾಗೂ ಚರ್ಚಾಕೂಟದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಗಡಿ ಭಾಗದ ಹತ್ತು ಗ್ರಾಮದ ರೈತರು ಸಾಲ ಪಡೆದು ಕೃಷ್ಣಾ ನದಿಯಿಂದ ಪೈಪ್‌ಲೈನ್ ಮೂಲಕ ನೀರಿನ ಸರಬರಾಜು ಮಾಡಿಕೊಂಡರು. 24*7 ವಿದ್ಯುತ್ ಎಕ್ಸ್‌ಪ್ರೆಸ್ ಲೈನ್ ಅಳವಡಿಸಿಕೊಂಡರು. ಆದರೆ ಪ್ರವಾಹ ಬಂದಾಗ ಸ್ಥಗಿತಗೊಂಡಿತು. ಆದರೂ ಹೆಸ್ಕಾಂನವರು ವಿದ್ಯುತ್ ಬಿಲ್ ಹಾಕಿದ್ದಾರೆ. ಇದರಿಂದ 500 ರೈತಕುಟುಂಬ ಬೀದಿ ಪಾಲಾಗಿವೆ. ಸರ್ಕಾರ ಶೀಘ್ರ ವಿದ್ಯುತ್ ಬಿಲ್ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡ ಆರ್.ಎಂ. ಪಾಟೀಲ, ಮರಗೆಪ್ಪ ಮಗದುಮ್, ತಾಲೂಕಾಧ್ಯಕ್ಷ ಎಂ.ಸಿ.ತಾಂಬೋಳಿ, ಬಾಬು ಜತ್ತಿ, ಗುರುಪಾದ ಮದಣ್ಣವರ, ಅಪ್ಪಾಸಾಬ ಮುಜಗುನಿ, ಶಿವಾನಂದ ಮುಜಗುನಿ, ಶ್ರೀಧರ ಹುಂಡೆಕರ, ಬಾಬು ಜತ್ತಿ, ಶ್ರೀಶೈಲ ಕೆಂಪವಾಡ, ಗಿರೀಶ ಟಕ್ಕೋಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net