

ಖಾನಾಪುರ: ತಾಲೂಕಿನ ತೋಪಿನಕಟ್ಟಿ ಮಹಾಲಕ್ಷಿ$್ಮ ಗ್ರೂಪ್ ವತಿಯಿಂದ ಜ.6ರಿಂದ 8ರ ವರೆಗೆ ಶಾಂತಿನಿಕೇತನ ಶಾಲೆಯ ವಾರ್ಷಿಕ ಸ್ನೇಹಸಮ್ಮೇಳನ ನಿಮಿತ್ತ ಶಾಲಾ ಮೆದಾನದಲ್ಲಿ ಮೂರು ದಿನಗಳ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಹಾಲಕ್ಷಿ$್ಮ ಸಮೂಹ ಸಂಸ್ಥೆ ಸಂಸ್ಥಾಪಕ ಅಧ್ಯ ವಿಠ್ಠಲ ಹಲಗೇಕರ ಹೇಳಿದರು.
ಶಾಸಕರ ಜನ್ಮದಿನದಂದು ವಿವಿಧ ಕಾರ್ಯಕ್ರಮ: ಜ.7ರಂದು ವಿಠ್ಠಲ ಹಲಗೇಕರ ಅವರ 63ನೇ ಜನ್ಮದಿನದ ನಿಮಿತ್ತ ಅಂದು ಕೆಎಲ್ಇ ಆಸ್ಪತ್ರೆ ಹಾಗೂ ಖಾನಾಪುರ ಸರ್ಕಾರಿ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಲೈಲಾ ಸಕ್ಕರೆ ಕಾರ್ಖಾನೆ ಪ್ರಧಾನ ವ್ಯವಸ್ಥಾಪಕ ಸದಾನಂದ ಪಾಟೀಲ ಹೆಳಿದರು. 6ರಂದು ಕಷಿಮೇಳ ಉದ್ಘಾಟನೆಗೊಳ್ಳಲಿದ್ದು, ಮೂರು ದಿನಗಳಲ್ಲಿ ವಿವಿಧ ಧಾರ್ಮಿಕ, ಸಾಂಸತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಪಟ್ಟಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಅದರ ಮೂಲಕ ವಿವಿಧ ಆಧುನಿಕ ಉಪಕರಣಗಳ ಪ್ರದರ್ಶನ, ಆಧುನಿಕ ಕಷಿ, ಆಹಾರ ಸಂಸ್ಕರಣಾ ಉದ್ಯಮದ ಬಗ್ಗೆ ಮಾರ್ಗದರ್ಶನ ನೀಡಲಾಗುವುದು. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಉದ್ಘಾಟನಾ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಜಗದೀಶ ಶೆಟ್ಟರ್ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸೇರಿ ಹಲವು ಗಣ್ಯರನ್ನು ಆಹ್ವಾನಿಸಲಾಗಿದೆ ಎಂದರು. ಉಪಾಧ್ಯ ವಿಠ್ಠಲ ಕರಂಬಾಳ್ಕರ, ಸಂಚಾಲಕ ಚಂಗಪ್ಪ ನಿಲಜಕರ, ಯಲ್ಲಪ್ಪ ತಿರವೀರ, ಗುಂಡು ಪಂಖರೆ, ತಾನಾಜಿ ಗೋರಲ್ ಇತರರಿದ್ದರು.