ಸದಸ್ಯರಿಗೆ ಶೇ.10 ಡಿವಿಡೆಂಡ್ : ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ: 19.20 ಲಕ್ಷ ರೂ. ಲಾಭ

sabhe
ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ರವೀಂದ್ರ ಕಂಬಳಿ ಮಾತನಾಡಿದರು. ಸಂಘದ ಉಪಾಧ್ಯಕ್ಷೆ ಶಶಿಕಲಾ ಉಡುಪ, ನಿರ್ದೇಶಕರಾದ ಉಮೇಶ್ ಪೂಜಾರಿ ಮೊದಲಾದವರಿದ್ದರು.
Published on

ಬಂಟ್ವಾಳ: ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ ನಿಯಮಿತ 327 ಲಕ್ಷ ರೂ. ವ್ಯವಹಾರ ನಡೆಸಿ 19.20 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ರವೀಂದ್ರ ಕಂಬಳಿ ತಿಳಿಸಿದರು.

ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಸದಸ್ಯರಿಗೆ ಶೇ.10 ಡಿವಿಡೆಂಡ್ ಘೋಷಿಸಿದರು.

ಸಂಘದ ಪಾಲು ಬಂಡವಾಳ 11.33 ಲಕ್ಷ ರೂ. ಮೀರಿದ್ದು, 2,597 ಲಕ್ಷ ರೂ. ಠೇವಣಿ ಹೊಂದಿದೆ. 2,796 ಲಕ್ಷ ರೂ. ದುಡಿಯುವ ಬಂಡವಾಳವಿದ್ದು, ಯಾವುದೇ ಬ್ಯಾಂಕಿನ ಸಾಲವಿಲ್ಲದೆ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಸಹಕಾರಿ ಸಂಘದಲ್ಲಿ 2,375 ಲಕ್ಷ ಠೇವಣಿ ಹೂಡಿದೆ. 390 ಲಕ್ಷ ರೂ. ಹೊರಬಾಕಿ ಸಾಲ ಕೊಡಲಾಗಿದೆ ಎಂದರು.

ಸಂಘದ ಉಪಾಧ್ಯಕ್ಷೆ ಶಶಿಕಲಾ ಉಡುಪ, ನಿರ್ದೇಶಕರಾದ ಉಮೇಶ್ ಪೂಜಾರಿ, ಪಿ.ವೆಂಕಟೇಶ್ ನಾವಡ, ರಾಜೇಶ್ ಶೆಟ್ಟಿ, ವೆಂಕಟ್ರಾಯ ಪ್ರಭು, ರತ್ನಾ, ಜ್ಞಾನೇಶ್ವರ ಪ್ರಭು, ಪದ್ಮನಾಭ ಕಿದೆಬೆಟ್ಟು, ರಾಯಿ ಸುಂದರ ಭಂಡಾರಿ, ಮನೋರಾಜ್ ಎ, ಪೂವಪ್ಪ, ರಾಮ ನಾಯ್ಕ, ರೋಹಿನಾಥ್ ಕೆ. ವೇದಿಕೆಯಲ್ಲಿದ್ದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು.ಧರ್ಮಪಾಲ ಭಂಡಾರಿ ನಿರೂಪಿಸಿದರು. ನಿರ್ದೇಶಕರಾದ ಬಿ.ಟಿ.ನಾರಾಯಣ ಭಟ್ ನೇರಳಕಟ್ಟೆ ವಂದಿಸಿದರು. ಸಿಬ್ಬಂದಿ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net