ಕೃಷಿ ಯಂತ್ರಧಾರೆ ಕೇಂದ್ರಗಳಿಗೆ ಬೀಳುತ್ತಿದೆ ಬೀಗ

CTD KRISHI YATNRA DARE KENDRA---------
Published on

ಡಿಪಿಎನ್ ಶ್ರೇಷ್ಠಿ,ಚಿತ್ರದುರ್ಗ

ಸಣ್ಣ ಮತ್ತು ಅತೀ ಸಣ್ಣ ರೈತರ ಅನುಕೂಲ ಹಾಗೂ ಕೃಷಿ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ರಾಜ್ಯದಲ್ಲಿ ಸ್ಥಾಪಿಸಿದ್ದ ಕೃಷಿ ಯಂತ್ರಧಾ ರೆ ಕೇಂದ್ರಗಳು ಹಂತ,ಹಂತವಾಗಿ ಮುಚ್ಚುತ್ತಿವೇಯೆ?ಇಂಥದೊಂದು ಪ್ರಶ್ನೆ ಕೃಷಿ ಇಲಾಖೆಯಲ್ಲೇ ಕೇಳಿ ಬರುತ್ತಿದೆ. ದುಬಾರಿ ನಿರ್ವಹ ಣಾ ವೆಚ್ಚ ಹಾಗೂ ಒಡಂಬಡಿಕೆ ಅವಧಿ ಪೂರ್ಣ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯದ ವಿವಿಧ ಹೋಬಳಿ ಕೇಂ ದ್ರಗಳಲ್ಲಿ 2014-15ನೇ ಸಾಲಿನಿಂದ ಪ್ರಾರಂಭಿದ್ದ ಸಿಎಚ್‌ಎಸ್‌ಸಿಗಳ ಭವಿಷ್ಯದ ಕುರಿತಂತೆ ಇಲಾಖೆಯಲ್ಲೇ ಭರವಸೆ ಇಲ್ಲವಾಗಿದೆ.

’ಕೃಷಿ ಯಂತ್ರಧಾರೆ’ಕೃಷಿ ಉಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳನ್ನು (ಸಿಎಚ್‌ಎಸ್‌ಸಿ)ಸರ್ಕಾರದಿಂದ ಶೇ.75 ಹಾಗೂ ಖಾಸಗಿಯವರ ಶೇ.25 ಮೊತ್ತದೊಂದಿಗೆ ಸ್ಥಾಪಿಸಲಾಗಿತ್ತು. ಆರಂಭದಲ್ಲಿ 50 ಲಕ್ಷ ರೂ.,75 ಲಕ್ಷ ರೂ.ನಂತರದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗಿದೆ. ಇಲಾಖೆ ಮೂಲಗಳ ಪ್ರಕಾರ 6/9 ವರ್ಷಗಳ ಕಾಲಾವಧಿಗೆ ಖಾಸಗಿಯವರೊಂದಿಗೆ ಕರಾರು ಆಗಿದೆ.

ಆಯಾ ಪ್ರದೇಶಕ್ಕೆ ಅನುಗುಣವಾಗಿ ಅಗತ್ಯ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ಆಧಾರದ ಮೇಲೆ ರೈತರಿಗೆ ಕೊಡಲಾಗುತ್ತಿದೆ. ಟ್ರ್ಯಾಕ್ಟರ್,ಪವರ್‌ಟಿಲ್ಲರ್,ಡಿಸ್ಕ್ ಹ್ಯಾರೋ,ಬಿತ್ತನೆ,ಕೂರಿಗೆ ಇತ್ಯಾದಿ 40ಕ್ಕೂ ಹೆಚ್ಚು ಬಗೆ ಯಂತ್ರೋಪಕರಣಗಳನ್ನು ಒದಗಿಸಲಾಗುತ್ತಿದೆ. ಆದರೆ ಚಾಲಕರು,ಕೆಲಸಗಾರಿಗೆ ವೇತನ ಭರಿಸಲು ಕಷ್ಟವಾಗುತ್ತಿರುವುದು,ಇಂಧನ ವೆಚ್ಚ ಸಹಿತ ನಿರ್ವಹಣೆ,ಹಾಳಾದ ಉಪಕರಣಗಳ ಬ ದಲಿ ಖರೀದಿ ಸಾಧ್ಯವಾಗ ಸ್ಥಿತಿಗೆ ತಲುಪುತಿರುವುದರಿಂದ ಕೇಂದ್ರಗಳನ್ನು ಮುನ್ನಡೆಸಲು ಆಸಕ್ತಿ ಇಲ್ಲವಾಗುತ್ತಿದೆಯಂತೆ.

ಕೋರ್ಟ್ ಮೆಟ್ಟಿಲು

ಕೆಲವೆಡೆ ಮುಚ್ಚಿರುವ ಕೇಂದ್ರಗಳಲ್ಲಿದ್ದ ಯಂತ್ರೋಪಕರಣಗಳನ್ನು ಇಲಾಖೆ ವಶಕ್ಕೆ ಪಡೆಯಲು ಮುಂದಾಗಿದ್ದು, ಇಲಾಖೆ ನಡೆ ಪ್ರಶ್ನಿಸಿ ಹಾಗೂ ತಮ್ಮ ಹಕ್ಕಿನ ಕುರಿತಂತೆ ಕೇಂದ್ರಗಳನ್ನು ನಿರ್ವಹಿಸುತ್ತಿದ್ದ ಹಲವು ಖಾಸಗಿ ಸಂಸ್ಥೆಗಳು,ಕೋರ್ಟ್ ಮೆಟ್ಟಿಲೇರಿವೆ ಎಂದು ಮೂಲಗ ಳು ತಿಳಿಸಿವೆ. ಶ್ರೀವೀರೇಂದ್ರ ಹೆಗ್ಗಡೆ ನೇತೃತ್ವದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕೇಂದ್ರ ಯೋಜನೆ(ಎಸ್‌ಕೆಡಿಆರ್‌ಪಿ)ಯಿಂದಲೂ ಕೇಂ ದ್ರಗಳನ್ನು ಸ್ಥಾಪಿಸಲಾಗಿದ್ದು,ಇವುಗಳ ಪೈಕಿ ಕೂಡ ಹಲವು ಮುಚ್ಚಿವೆ.

ಸರ್ಕಾರವೂ ಈ ಕೇಂದ್ರಗಳ ಭವಿಷ್ಯದೆಡೆ ಉತ್ಸಾಹ ತೋರಿಸುತ್ತಿಲ್ಲ. ಬದಲಿಗೆ ಕಳೆದ 2 ವರ್ಷಗಳಿಂದ ಇಚೆಗೆ ಹಾರ್‌ವೆಸ್ಟಿಂಗ್ ಹಬ್‌ಗೆ ಒತ್ತು ನೀಡುತ್ತಿದೆ. ಕಟಾವು ಯಂತ್ರಗಳನ್ನು ಸಾಮಾನ್ಯ ವರ್ಗಕ್ಕೆ ಶೇ.50,ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡದವರಿಗೆ ಹಾಗೂ ಕೃಷಿ ಉತ್ಪಾದಕ ಕಂಪನಿಗಳಿಗೆ ಶೇ.70 ಸಬ್ಸಿಡಿ ದರದಲ್ಲಿ ಒದಗಿಸುವ ಮೂಲಕ ಹಾರ್‌ವೆಸ್ಟಿಂಗ್‌ಹಬ್‌ಗೆ ಸರ್ಕಾರ ಅನುದಾನ ಕೊಡುತ್ತಿದೆ.

ನಾಲ್ಕು ಕೇಂದ್ರ ಕಾರ‌್ಯನಿರ್ವಹಣೆ

ಚಿತ್ರದುರ್ಗ ಜಿಲ್ಲೆ 22 ಕೇಂದ್ರಗಳ ಪೈಕಿ ಪ್ರಸ್ತುತ 4 ಕೇಂದ್ರಗಳು ಕಾರ‌್ಯನಿರ್ವಹಿಸುತ್ತಿವೆ. ಚಳ್ಳಕೆರೆ ತಾಲೂಕು ಚಳ್ಳಕೆರೆ ನಾಯಕನಹಟ್ಟಿ, ತಳಕು ಹಾಗೂ ಪರಶುರಾಮಪುರ ಕೇಂದ್ರಗಳು ಮುಚ್ಚಿವೆ.ಚಿತ್ರದುರ್ಗ ತಾಲೂಕಿನ 4ರ ಪೈಕಿ ಹಿರೇಗುಂಟನೂರು ಕೇಂದ್ರ ಕಾರ‌್ಯನಿರ್ವ ಹಿ ಸುತ್ತಿದೆ,ಭರಮಸಾಗರ,ಚಿತ್ರದುರ್ಗ ಹಾಗೂ ತುರುವನೂರು ಕೇಂದ್ರಗಳಿಗೆ ಬೀಗ ಬಿದ್ದಿದೆ.

ಹಿರಿಯೂರು ತಾಲೂಕು ಐಮಂಗಲ,ಧರ್ಮಪುರ,ಹಿರಿಯೂರು ಹಾಗೂ ಜೆಜೆಹಳ್ಳಿ ಕೇಂದ್ರಗಳು ಬಂದ್ ಆಗಿವೆ. ಹೊಳಲ್ಕೆರೆ ತಾ ಲೂಕು ತಾಳ್ಯ ಕೇಂದ್ರ ಹೊರತುಪಡಿಸಿ ಬಿ.ದುರ್ಗ,ಹೊಳಲ್ಕೆರೆ,ರಾಮಗಿರಿ ಹಾಗೂ ಹೊಸದುರ್ಗ ತಾಲೂಕು ಮತ್ತೋಡು ಕೇಂದ್ರ ಹೊರ ತುಪಡಿಸಿ ಹೊಸದುರ್ಗ,ಮಾಡದಕೆರೆ,ಶ್ರೀರಾಂಪುರ ಕೇಂದ್ರಗಳನ್ನು ಮುಚ್ಚಲಾಗಿದೆ. ಮೊಳಕಾಲ್ಮೂರು ತಾಲೂಕು ದೇವಸಮುದ್ರದ ಕೇಂದ್ರ ಚಾಲ್ತಿಯಲ್ಲಿದ್ದು, ಮೊಳಕಾಲ್ಮೂರು ಕೇಂದ್ರ ಸ್ಥಗಿತಗೊಂಡಿದೆ.

---

ಕೋಟ್

ಮುಚ್ಚಿರುವ ಸಿಎಚ್‌ಎಸ್‌ಸಿಗಳನ್ನು ಮುನ್ನಡೆಸಲು ಎಫ್‌ಪಿಒ/ಸ್ವಸಹಾಯ ಸಂಘಗಳು ಮುಂದೆ ಬಂದರೆ,ಅವುಗಳಿಗೆ ನಿಯಾನುಸಾರ ವಹಿಸಲು ಸರ್ಕಾರದ ನಿರ್ದೇಶನವಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಹಾರ್‌ವೆಸ್ಟಿಂಗ್‌ಹಬ್‌ಗೆ, ಚಳ್ಳಕೆರೆ ಮತ್ತು ಹೊಳಲ್ಕೆರೆ ತಾಲೂಕಿಗೆ ಕ್ರ ಮ ವಾಗಿ 12 ಲಕ್ಷ ರೂ.ವೆಚ್ಚ ದಲ್ಲಿ 14.50 ಲಕ್ಷ ರೂ.ಅನುದಾನ ಬಿಡುಗಡೆಯಾಗಿದೆ.

ಡಾ.ಬಿ.ಮಂಜುನಾಥ್,ಜಂಟಿ ನಿರ್ದೇಶಕ,ಕೃಷಿ ಇಲಾಖೆ,ಚಿತ್ರದುರ್ಗ.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net