2.36 ಲಕ್ಷ ರೂ.ಮೌಲ್ಯದ ಕೃಷಿ ಪರಿಕರ ವಶಕ್ಕೆ

20KDR1 (2)
ಕಡೂರು ಎಪಿಎಂಸಿಯಲ್ಲಿ ಪರವನಗಿ ಇಲ್ಲದೆ ದಾಸ್ತಾನು ಮಾಡಿದ್ದ 2.36 ಲಕ್ಷ ಮೌಲ್ಯದ ಕೃಷಿ ಪರಿಕರಗಳನ್ನು ಕೃಷಿ ಜಾರಿದಳದ ಅಧಿಕಾರಿಗಳ ತಂಡ ವಶಪಡಿಸಿಕೊಂಡರು. ಅನುಪ್, ಹಂಸವೇಣಿ, ನಾಗರಾಜ್, ಅಶೋಕ್, ತಿಮ್ಮನಗೌಡ ಪಾಟೀಲ್ ಇದ್ದರು.
Published on

ಕಡೂರು: ಪಟ್ಟಣದ ಎಪಿಎಂಸಿ ಮಳಿಗೆಯಲ್ಲಿರುವ ಅಂಗಡಿಯೊಂದರಲ್ಲಿ ಪರವಾನಗಿ ಇಲ್ಲದೆ ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ 2.36 ಲಕ್ಷ ರೂ. ಮೌಲ್ಯದ ಕೃಷಿ ಪರಿಕರಗಳನ್ನು ಕೃಷಿ ಇಲಾಖೆ ಅಧಿಕಾರಿಗಳ ತಂಡ ಶುಕ್ರವಾರ ವಶಪಡಿಸಿಕೊಂಡಿದೆ. ಪಟ್ಟಣದ ಮಾರಾಟ ಮಳಿಗೆಯೊಂದರಲ್ಲಿ ಮೇಲೆ ಅಪರ ಕೃಷಿ ನಿರ್ದೇಶಕರು ಜಾರಿದಳದ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲಿಸಿ ಪರವಾನಗಿ ಇಲ್ಲದೆ 2.36 ಲಕ್ಷ ರೂ. ಮೌಲ್ಯದ ಜೈವಿಕ ಗೊಬ್ಬರ ಮತ್ತು ಜೈವಿಕ ಕೀಟನಾಶಕಗಳನ್ನು ವಶಕ್ಕೆ ಪಡೆದಿದ್ದಾರೆ. ಕೃಷಿ ಇಲಾಖೆಯ ಜಾರಿ ದಳ ವಿಭಾಗದ ಅಪರ ಕೃಷಿ ನಿರ್ದೇಶಕ ಅನುಪ್, ತರೀಕೆರೆ ಉಪ ವಿಭಾಗದ ಕೃಷಿ ನಿರ್ದೇಶಕಿ ಹಂಸವೇಣಿ, ಜಾರಿದಳ ವಿಭಾಗದ ಸಹಾಯಕ ಕೃಷಿ ನಿರ್ದೇಶಕ ನಾಗರಾಜ್, ಜಾರಿದಳ ಸಹಾಯಕ ನಿರ್ದೇಶಕ ತಿಮ್ಮನಗೌಡ ಪಾಟೀಲ್, ತಾಲೂಕು ಸಹಾಯಕ ಕೃಷಿ ನಿರ್ದೇಶಕ ಅಶೋಕ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net