ಕೃಷಿ ಮೇಳ ಸೆ. 21ರಿಂದ

Vijayavani-Featured-Image
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕೃಷಿ ವಿಶ್ವ ವಿದ್ಯಾಲಯ ಆವರಣದಲ್ಲಿ ಸೆ. 21ರಿಂದ 24ರವರೆಗೆ ಕೃಷಿ ಮೇಳ ಏರ್ಪಡಿಸಲಾಗಿದೆ ಎಂದು ವಿಸ್ತರಣಾ ನಿರ್ದೇಶಕರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಪ್ರಸಕ್ತ ವರ್ಷದ ರೈತ ಜಾತ್ರೆಯನ್ನು ಹವಾಮಾನ ವೈಪರಿತ್ಯ ನಿರ್ವಹಣೆಗೆ ಕೃಷಿ ತಾಂತ್ರಿಕತೆಗಳು ಎಂಬಡಬ್ಲ್ಯೂಘೋಷವಾಕ್ಯದಡಿ ಆಯೋಜಿಸಲಾಗುತ್ತಿದೆ. ಮೇಳದಲ್ಲಿ ಕೃಷಿ ಹಾಗೂ ಕೃಷಿ ಪೂರಕ ತಂತ್ರಜ್ಞಾನಗಳೊಂದಿಗೆ ಬೀಜ ಮೇಳ, ಹೈಟೆಕ್​ ತೋಟಗಾರಿಕೆ, ಫಲ-ಪುಷ್ಪ ಪ್ರದರ್ಶನ, ವಿಸ್ಮಯಕಾರಿ ಕೀಟ ಪ್ರಪಂಚ ಹಾಗೂ ಜಾನುವಾರು ಪ್ರದರ್ಶನಗಳೊಂದಿಗೆ ಆಯೋಜಿಸಲಾಗುವುದು.
ವಿಶ್ವ ವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಆವರಣಗಳಲ್ಲಿ ಕೈಗೊಂಡ ಬೋಧನೆ, ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಗಳ ಸಮಗ್ರ ಮಾಹಿತಿಯನ್ನು ರೈತ ಸಮುದಾಯಕ್ಕೆ ಒದಗಿಸಲಾಗುವುದು. ಹವಾಮಾನ ವೈಪರಿತ್ಯ ನಿರ್ವಹಣೆಗೆ ಸೂಕ್ತ ಕೃಷಿ ತಾಂತ್ರಿಕತೆಗಳು, ಅಧಿಕ ಇಳುವರಿ ಮತ್ತು ಸಮರ್ಪಕ ನೀರಿನ ಬಳಕೆಗಾಗಿ ಸುಧಾರಿತ ನೀರಾವರಿ ಪದ್ಧತಿಗಳು, ವಿವಿಧ ಬೆಳೆಗಳ ತಾಂತ್ರಿಕತೆಗಳು, ಸಂಪನ್ಮೂಲ ರಕ್ಪಣೆಗೆ ಸಮಗ್ರ ಜಲಾನಯನ ಅಭಿವೃದ್ಧಿ, ಸುಧಾರಿತ ಕೃಷಿ ಯಂತ್ರೋಪಕರಣಗಳ ಬಳಕೆ, ಡ್ರೋನ್​ ತಂತ್ರಜ್ಞಾನ, ನಿಖರ ಕೃಷಿ, ಅತೀ ಕಡಿಮೆ ಹಾಗೂ ಹೆಚ್ಚಿನ ತೇವಾಂಶದ ಪರಿಸ್ಥಿತಿಯಲ್ಲಿ ಬೆಳೆಯಲು ಸೂಕ್ತವಾದ ತಳಿಗಳು ಸೇರಿ ಇತರ ವಿಷಯಗಳ ಕುರಿತು ರೈತರೊಂದಿಗೆ ಸಂವಾದ ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net