ಕೃಷಿ ಚಟುವಟಿಕೆ ಮಾಹಿತಿ ಕಾರ್ಯಕ್ರಮ

krushi
ಮುಡುಗಿಳಿಯಾರು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕೃಷಿ ಚಟುವಟಿಕೆ ಮಾಹಿತಿ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ತಿಮ್ಮ ಪೂಜಾರಿ, ಇಂಟರ‌್ಯಾಕ್ಟ್ ಕ್ಲಬ್ ಚೇರ್ಮನ್ ಶರಣಯ್ಯ ಹಿರೇಮಠ್, ಗೋಪಾಲ ಜಿ., ಅಧ್ಯಾಪಕರು ಉಪಸ್ಥಿತರಿದ್ದರು
Published on

ಕೋಟ: ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ನೇತೃತ್ವದಲ್ಲಿ ಮುಡುಗಿಳಿಯಾರು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕೃಷಿ ಚಟುವಟಿಕೆ ಮಾಹಿತಿ ಕಾರ್ಯಕ್ರಮ ಬುಧವಾರ ನಡೆಯಿತು. ರೋಟರಿ ಕ್ಲಬ್ ಅಧ್ಯಕ್ಷ ತಿಮ್ಮ ಪೂಜಾರಿ ಅಡಕೆ ತೋಟದಲ್ಲಿ ಅಡಕೆಯೊಂದಿಗೆ ಅನಾನಸು, ಪಪ್ಪಾಯ, ಕರಿಮೆಣಸು, ಬಾಳೆ ಇತ್ಯಾದಿ ಬೆಳೆ ತೆಗೆದರೆ ಆದಾಯ ಹೆಚ್ಚಿಸಿಕೊಳ್ಳಬಹುದು, ಅಡಕೆ ತಳಿ ಆಯ್ಕೆ ಬಹಳ ಮುಖ್ಯ ಈ ಬಗ್ಗೆ ಮಾಹಿತಿ ನೀಡಿದರು. ಇಂಟರ‌್ಯಾಕ್ಟ್ ಕ್ಲಬ್ ಚೇರ್ಮನ್ ಶರಣಯ್ಯ ಹಿರೇಮಠ್, ಗೋಪಾಲ ಜಿ. ಮತ್ತು ಅಧ್ಯಾಪಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net